ಹೂಡೆ: ಹಾಜಿ ಬೈಕಾಡಿ ಇಸ್ಮಾಯಿಲ್ ಸಾಹೇಬ್ ನಿಧನ

0
30

ಸನ್ಮಾರ್ಗ ವಾರ್ತೆ

ಹೂಡೆ: ಬೈಕಾಡಿ ಕುಟುಂಬದ ಮುಖ್ಯಸ್ಥ, ತೋನ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹಾಜಿ ಬೈಕಾಡಿ ಇಸ್ಮಾಯಿಲ್ ಸಾಹೇಬ್ (97) ಅಲ್ಪಕಾಲಿಕ ಅಸೌಖ್ಯದಿಂದಾಗಿ ಮಂಗಳವಾರ ನಿಧನರಾದರು.

ಖಾದೀಮ್ ಜಾಮಿಯಾ ಮಸೀದಿ ಹೂಡೆ ಇದರ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ದಾರುಸ್ಸಲಾಂ ಶಿಕ್ಷಣ ಸಂಸ್ಥೆ ಹಾಗೂ ಹೂಡೆಯ ಸರಕಾರಿ ಉರ್ದು ಶಾಲೆಯ  ಏಳಿಗೆಗಾಗಿ ದುಡಿದಿದ್ದರು.

ಅವರು ಪತ್ನಿ, ಹೂಡೆ ತೋನ್ಸೆ ಹೆಲ್ತ್ ಸೆಂಟರ್ ಮಾಲೀಕರಾದ ಬಿ.ಎಂ.ಜಾಫರ್ ಸೇರಿದಂತೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ಹೂಡೆ ತೋನ್ಸೆಯ ಖಾದೀಮ್ ಜಾಮಿಯಾ ಮಸೀದಿಯಲ್ಲಿ ಲುಹರ್ ನಮಾಝಿನ ಬಳಿಕ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.