ಭಾರತದಲ್ಲಿ 24 ಗಂಟೆಯೊಳಗೆ 50 ಸಾವು; ಕೊರೊನಾ ಪೀಡಿತರ ಸಂಖ್ಯೆ 19,984

0
683

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 23: ದೇಶದಲ್ಲಿ ಕಳೆದ 24 ಗಂಟೆಗಳೊಳಗೆ ಕೊರನಾಕ್ಕೆ 50 ಮಂದಿ ಬಲಿಯಾಗಿದ್ದಾರೆ. ಹೊಸದಾಗಿ 1383 ಮಂದಿಗೆ ಕೊರೊನಾ ಬಂದಿದೆ.19,984 ಮಂದಿಗೆ ಕೊರೊನಾ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. 640 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಎಪ್ರಿಲ್ 14 ರವರೆಗೆ 10 ಸಾವಿರ ಮಂದಿಗೆ ಕೊರೊನಾ ಇರುವುದು ವರದಿಯಾಗಿತ್ತು. ಎಪ್ರಿಲ್ 21ಕ್ಕೆ 5,474 ಮಂದಿ ಕೊರೊನಾ ವೈರಸ್‍ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 3869 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಹಬ್ಬುತ್ತಿರುವುದು ಕಡಿಮೆಯಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ. ಮಹಾರಾಷ್ಟ್ರದಲ್ಲಿ 6191 ಮಂದಿಗೆ ಕೊರೊನಾ ದೃಢಪಟ್ಟಿದೆ. ಇಲ್ಲಿ 25 ಮಂದಿ ಮೃತಪಟ್ಟಿದ್ದಾರೆ.

722 ಮಂದಿ ಯಶಸ್ವಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಜರಾತಿನಲ್ಲಿ 2178 ಮಂದಿಗೆ ಕೊರೊನಾ ಇದೆ. ದಿಲ್ಲಿಯಲ್ಲಿ ಕೊರೊನಾ ಹಬ್ಬುವಿಕೆ ಹೆಚ್ಚಳವಾಗಿದ್ದು ಇಲ್ಲಿ ಇದುವರೆಗೆ 2156 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.