ಮಹಾರಾಷ್ಟ್ರ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಸಾವು

0
500

ಸನ್ಮಾರ್ಗ ವಾರ್ತೆ

ಮುಂಬೈ,ಆ.31: ಮಹಾರಾಷ್ಟ್ರದ ಧೂರಿಯ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಫ್ಯಾಕ್ಟರಿಯೊಳಗಿನ ಅನಿಲ ಸಿಲಿಂಡರ್ ಸ್ಫೋಟಗೊಂಡಿರುವುದು ಅವಗಡಕ್ಕೆ ಕಾರಣವಾಗಿದೆ. ಶನಿವಾರ ಬೆಳಗ್ಗೆ 9:45ಕ್ಕೆ ದುರ್ಗಟನೆ ನಡೆದಿದೆ.

ಫ್ಯಾಕ್ಟರಿಯಲ್ಲಿ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಸ್ಫೋಟವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಅವಗಢ ನಡೆಯುವಾಗ ಕಾರ್ಖಾನೆಯಲ್ಲಿ ನೂರರಷ್ಟು ಕೆಲಸಗಾರರಿದ್ದರು. ಎಂಟು ಮೃತದೇಹವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಹಲವರು ಕಾರ್ಖಾನೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ. ಶಿರ್ಪುರ ಪೊಲೀಸ್ ಅಪಾಯ ನಿರ್ವಹಣಾ ಸೇನೆ ಸ್ಥಳಕ್ಕಾಗಮಿಸಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ.