‘ರಾಮ್ ಕೆ ನಾಮ್’ ಡಾಕ್ಯುಮೆಂಟರಿ ತಡೆದು ಎಬಿವಿಪಿ ದಾಂಧಲೆ; ಎಸ್‍ಎಫ್‍ಐ ಆರೋಪ

0
459

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ. 31: ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಕಾಶ್ಮೀರ್‌ಗೇಟ್ ಕ್ಯಾಂಪಸ್ಸಿನಲ್ಲಿ “ರಾಮ್‍ ಕೆ ನಾಮ್” ಡಾಕ್ಯುಮೆಂಟರಿ ಪ್ರದರ್ಶನವನ್ನು ಎಬಿವಿಪಿ ತಡೆದು, ಜಾತಿ ನಿಂದೆ ಮಾಡಿದ್ದಾರೆ ಎಂದು ಎಸ್‍ಎಫ್‍ಐ ಆರೋಪಿಸಿದೆ. ಎಬಿವಿಪಿ ಸದಸ್ಯರು ಡಾಕ್ಯುಮೆಂಟರಿ ಪ್ರದರ್ಶನ ವೇದಿಕೆಯಲ್ಲಿ ದಾಂಧಲೆ ಮಾಡಿದ್ದಾರೆ ಎಂದು ಎಸ್‍ಎಫ್‍ಐ ಆರೋಪಿಸಿದೆ. ಆದರೆ ಇಂತಹ ಘಟನೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಶುಕ್ರವಾರ ಆನಂದ್ ಪಟ್‍ವರ್ಧನ್‍ರ ‘ರಾಮ್ ಕೆ ನಾಮ್’ ಡಾಕ್ಯುಮೆಂಟರಿ ಪ್ರದರ್ಶನವನ್ನು ಎಸ್‍ಎಫ್‍ಐ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಕ್ಯಾಂಪಸಿನಲ್ಲಿ ಆಯೋಜಿಸಿತ್ತು. ಈ ಡಾಕ್ಯುಮೆಂಟರಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಅವರಿಗೆ ಬೆಂಬಲ ಸೂಚಿಸಿ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಕೂಡ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು ಎಂದು ಎಸ್‍ಎಫ್‍ಐ ತಿಳಿಸಿದೆ. ಇದೇ ವೇಳೆ ದಾಂಧಲೆ ಆರೋಪವನ್ನು ಎಬಿವಿಪಿ ನಿರಾಕರಿಸಿದೆ.