ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 10: ಪೌರತ್ವ ತಿದ್ದು ಪಡಿ ಕಾನೂನು ವಿರುದ್ಧ ಮಾಜಿ ಸರಕಾರಿ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಪೌರತ್ವ ಪಟ್ಟಿ ಮತ್ತು ದೇಶೀಯ ಜನಸಂಖ್ಯಾ ರಿಜಿಸ್ಟರ್ ಅನವಶ್ಯಕ ದುಂದುವೆಚ್ಚವೆಂದು 106 ಮಂದಿ ಸಹಿಹಾಕಿದ ಪತ್ರ ಎತ್ತಿತೋರಿಸಿದೆ.
ದಿಲ್ಲಿ ಮಾಜಿ ಉಪರಾಜ್ಯಪಾಲ ನಜೀಬ್ ಜಂಗ್, ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕೆ.ಎಂ ಚಂದ್ರಶೇಖರನ್, ಮಾಜಿ ಪ್ರಧಾನ ಮಾಹಿತಿ ಹಕ್ಕು ಕಮಿಶನರ್ ವಜತ್ ಹಬೀಬುಲ್ಲ ಮುಂತಾದವರು ಪತ್ರದಲ್ಲಿ ಸಹಿ ಮಾಡಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನಿನ ವಿಷಯಗಳು ಸಂವಿಧಾನಾತ್ಮಕ ಸಿಂಧುವಲ್ಲ. ಸಮರ್ಥಿಸಲು ಸಾಧ್ಯವಿಲ್ಲ. ದೇಶದ ಜನಸಂಖ್ಯೆಯ ದೊಡ್ಡ ವಿಭಾಗವಾದ ಮುಸ್ಲಿಮರನ್ನು ಕಾನೂನಿಂದ ಹೊರಗಿಟ್ಟದ್ದು ತಪ್ಪು. ಸಿಎಎ, ಎನ್ಪಿಆರ್, ಎನ್ ಸಿಆರ್ ದೇಶಕ್ಕೆ ಅಗತ್ಯವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ದೇಶ ಆರ್ಥಿಕ ಬಿಕ್ಕಟ್ಟಿಲ್ಲಿದೆ. ಇದರತ್ತ ಕೇಂದ್ರ ಸರಕಾರ ಮುಖ್ಯವಾಗಿ ಗಮನಕೊಡಬೇಕು. ಪೌರತ್ವದ ವಿಷಯದ ಸಮಸ್ಯೆಗಳು ದೇಶಕ್ಕೆ ಹಾನಿ ಮಾಡುತ್ತಿವೆ. ಬೀದಿಯಲ್ಲಿ ಘರ್ಷಣೆಯ ಸ್ಥಿತಿ ಇಲ್ಲದಂತೆ ಮಾಡಲು ಸರಕಾರ ಮಧ್ಯಪ್ರವೇಶಿಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.












