ದುಬೈ: ತತ್ಕಾಲ್ ಪಾಸ್‍ಪೋರ್ಟು ಅರ್ಜಿ ಸಲ್ಲಿಸಿದಂದೇ ಸಿಗಲಿದೆ

0
983

ಸನ್ಮಾರ್ಗ ವಾರ್ತೆ-

ದುಬೈ, ಜ. 10: ಉತ್ತರ ಎಮಿರೇಟ್, ದುಬೈಯ ಭಾರತದ ಅನಿವಾಸಿಗಳಿಗೆ ಪಾಸ್‍ಪೋರ್ಟು ಭಾರೀ ಸುಲಭದಲ್ಲಿ ಸಿಗುವ ಸೌಲಭ್ಯ ಒದಗಿಸಲಾಗಿದೆ. ತತ್ಕಾಲ್ ಪಾಸ್‍ಪೋರ್ಟಿಗೆ ಅರ್ಜಿ ಹಾಕಿದವರಿಗೆ ಅರ್ಜಿ ಹಾಕಿದ ದಿನವೇ ಕೊಡುವ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕಾನ್ಸುಲ್ ಜನರಲ್ ವಿಪುಲ್ ತಿಳಿಸಿದರು. ಕಾನ್ಸುಲೇಟಿನಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನ ಸಮಾರಂಭದಲ್ಲಿ ಅವರು ಹೀಗೆ ಘೋಷಿಸಿದರು. ಬಾರದುಬೈ ಅಲ್ ಖಲೀಜ್ ಸಾಂಟ್‍ನ ಬಿಎಲ್‍ಎಸ್ ಇಂಟರ್‍ನ್ಯಾಶನಲ್ ಕಚೇರಿಯಲ್ಲಿ ದಿನಾಲೂ ಮಧ್ಯಾಹ್ನದ ಮೊದಲು ಅರ್ಜಿ ಸಲ್ಲಿಸಿದರೆ ಅದೇ ದಿನ ಅವರಿಗೆ ತತ್ಕಾಲ ಪಾಸ್‍ಪೋಟು ಕೊಡಲಾಗುವುದು ಎಂದು ಅವರು ಹೇಳಿದರು.

ಈಗ 24 ಗಂಟೆಯೊಳಗೆ ತತ್ಕಾಲ್ ಪಾಸ್‍ಪೋಟು ನೀಡಲಾಗುತ್ತಿದೆ. ಇನ್ನು ಅದಕ್ಕಿಂತಲೂ ಬೇಗನೆ ಒದಗಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. 36 ಪುಟದ ಪಾಸ್‍ಪೋರ್ಟಿಗೆ 855 ದಿರ್‍,ಹಂ 60 ಪುಟದ ಪಾಸ್‍ಪೋರ್ಟಿಗೆ 950 ದಿರ್‍ಹಂ ನೀಡಬೇಕಾಗಿದೆ. ಸಾಮಾನ್ಯ ಅರ್ಜಿ ದಾರರಲ್ಲಿ 36 ಪುಟದ ಪಾಸ್‍ಪೋರ್ಟು 285 ದಿರ್‍ಹಂಗೆ ಕೊಡಲಾಗುವುದು. 60 ಪುಟದ್ದಕ್ಕೆ 380 ದಿರ್‍ಹಂ ನೀಡಬೇಕಾಗಿದೆ. ತುರ್ತಾಗಿ ಪಾಸ್‍ಪೋರ್ಟು ಅಗತ್ಯ ಇರುವವರು ಮತ್ತು ಸಮಯ ಮೀರಿದ್ದು ಪ್ರಯಾಣಿಸುವ ದಿನದಂದೇ ಗೊತ್ತಾದವರಿಗೆ ಹೆಚ್ಚು ಉಪಕಾರವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ವಿಫುಲ್ ಹೇಳಿದರು. ಹಿಂದೆ ಪ್ರತಿ ದಿನ 40 ಅರ್ಜಿದಾರರು ತತ್ಕಾಲ್ ಪಾಸ್‍ಪೋರ್ಟಿಗೆ ಬರುತ್ತಿದ್ದರು. ಈಗ ಹದಿನೈದು ಅಥವಾ ಇಪ್ಪತ್ತು ಅರ್ಜಿಗಳು ಬರುತ್ತಿವೆ. ಅಂದರೆ ತತ್ಕಾಲ್ ಪಾಸ್‍ಪೋರ್ಟು ನೀಡುವುದನ್ನು ತ್ವರಿತಗೊಳಿಸಿದ್ದು ಇದಕ್ಕೆ ಕಾರಣ. ಹಿಂದೆಲ್ಲ ಸರಾಸರಿ ಪ್ರತಿದಿನ 850 ತಾತ್ಕಾಲ್ ಪಾಸ್‍ಪೋರ್ಟು ಅರ್ಜಿಗಳು ಬರುತ್ತಿದ್ದವು ಎಂದು ಅವರು ಹೇಳಿದರು.