ಭೋಪಾಲ್: ಜಿಲ್ಲಾಸ್ಪತ್ರೆಯಿಂದಲೇ ಆಕ್ಸಿಜನ್ ಸಿಲಿಂಡರ್ ಗಳನ್ನು ಕದ್ದೊಯ್ದ ಜನರು..!

0
299

ಸನ್ಮಾರ್ಗ ವಾರ್ತೆ

ಭೋಪಾಲ್ : ಮಧ್ಯಪ್ರದೇಶದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಸರಕಾರ ಹೇಳಿದರೂ ಆಸ್ಪತ್ರೆಯ ಆಕ್ಸಿಜನ್ ಸಂಗ್ರಾಹಾರದ ಕೋಣೆಯನ್ನು ಜನರು ಕೊಳ್ಳೆ ಹೊಡೆಡಿರುವ ಘಟನೆ ವರದಿಯಾಗಿದೆ. ದಾಮೊ ಜಿಲ್ಲಾಸ್ಪತ್ರೆಯಿಂದ ಜನರು ಆಕ್ಸಿಜನ್ ಸಿಲಿಂಡರ್ ಗಳನ್ನು ಎತ್ತೊಯ್ದು ಹೋಗುವ ದೃಶ್ಯ ಕಂಡು ಬಂದಿದೆ.

ಶುಕ್ರವಾರ ಮಧ್ಯ ರಾತ್ರಿ ಘಟನೆ ನಡೆದಿದ್ದು ಮಧ್ಯಪ್ರದೇಶದ ಪ್ರಧಾನ ಕೊರೋನಾ ಆಸ್ಪತ್ರೆಗಳಲ್ಲಿ ದಾಮೊ ಜಿಲ್ಲಾಸ್ಪತ್ರೆಯೂ ಒಂದಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಕೊಡಲಿಕ್ಕಾಗಿ ಆಕ್ಸಿಜನ್ ಸಿಲಿಂಡರ್ ಅನ್ನು ಇಲ್ಲಿ ದಾಸ್ತಾನು ಇಡಲಾಗಿತ್ತು. ಅದನ್ನು ಜನರು ಹೆಗಲಲ್ಲಿ ಹೊತ್ತುಕೊಂಡು ಹೋಗಿದ್ದಾರೆ. ಆಕ್ಸಿಜನ್ ಸಿಲಿಂಡರ್ ಗಳು ಕದ್ದು ಹೋಗಿದ್ದರಿಂದ ವೈದ್ಯರು, ಆರೋಗ್ಯ ಕಾರ್ಯಕರ್ತರ ಕೆಲಸಕ್ಕೆ ಅಡಚಣೆಯಾಯಿತು. ಆಸ್ಪತ್ರೆಯ ಕ್ಯಾಂಪಸ್‍ನಲ್ಲಿ ಪೊಲೀಸರು ಬಂದ ಬಳಿಕವೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕೆಲಸ ಮಾಡಲು ಶುರುಮಾಡಿದ್ದಾರೆ.

ಸೋಮವಾರ ಸಮಾನ ಘಟನೆ ಆಸ್ಪತ್ರೆಯಲ್ಲಿ ನಡೆದಿತ್ತು. ಪೊಲೀಸರಿಗೆ ಮಾಹಿತಿ ನೀಡಿದರೂ ಯಾರ ವಿರುದ್ಧ ಕೇಸು ಹಾಕಿಲ್ಲ. ಸೋಮವಾರದ ಘಟನೆಯ ಬಳಿಕ ಪೊಲೀಸರಿಗೆ ಮತ್ತು ಜಿಲ್ಲಾಡಳಿತಕ್ಕೆ ತಿಳಿಸಲಾಗಿತ್ತು. ಇಂತಹ ಸನ್ನಿವೇಶಗಳಲ್ಲಿ ವೈದ್ಯರಿಗೆ ಮತ್ತು ಇತರ ಆಸ್ಪತ್ರೆಯ ಇತರ ಕೆಲಸಗಾರರಿಗೆ ಕೆಲಸ ಮಾಡಲು ಕಷ್ಟ ಆಗುತ್ತದೆ ಎಂದು ದಾಮೊ ಜಿಲ್ಲೆಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಮಮ್ತ ತಿಮೊತಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here