ಕೊರೋನಾ ಭಯದಿಂದ ಮೃತದೇಹ ಸಂಸ್ಕಾರ ಮಾಡದ ಹಿಂದೂ ಯುವಕನ ಕುಟುಂಬ: ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಸಹೋದರರು

0
867

ಸನ್ಮಾರ್ಗ ವಾರ್ತೆ

ಹೈದರಾಬಾದ್: ತೆಲಂಗಾಣದಲ್ಲಿ ಕೊರೋನಾದಿಂದ ಮೃತಪಟ್ಟ ಹಿಂದೂ ಯುವಕನ ಮೃತದೇಹ ಸಂಸ್ಕಾರ ಕಾರ್ಯ ಮಾಡಲು ಅವನ ಕುಟುಂಬಿಕರು ಮುಂದೆ ಬರದಿದ್ದಾಗ ಸ್ಥಳೀಯ ಇಬ್ಬರು ಮುಸ್ಲಿಮ್ ಸಹೋದರರು ಅಂತ್ಯಸಂಸ್ಕಾರವನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ. ತೆಲಂಗಾಣದ ಪೆಡ್ಡ ಕೊಡಪಗಲ್ ಮಂಡಲ್‍ನ ಕಡಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕೊರೋನಾದಿಂದ ಮೃತಪಡುವ ಜನರ ಮೃತದೇಹಗಳಿಂದ ಶ್ಮಶಾನ ಸೇರಿದಂತೆ ಶವಸಂಸ್ಕಾರ ಕೇಂದ್ರ ತುಂಬಿಕೊಂಡಿತ್ತು. ರೋಗ ನಮಗೆ ಬಂದರೆ ಎಂದು ಸ್ವತಃ ಸಂಬಂಧಿಕರೇ ಮೃತದೇಹವನ್ನು ತೆಗೆದುಕೊಳ್ಳಲು ನಿರಾಕರಿಸುವ ಪರಿಸ್ಥಿತಿಯಿದೆ. ಹೀಗಿರುವಾಗ ಧರ್ಮದ ಬೇಧ ಭಾವ ಬಿಟ್ಟು ಆಂಬುಲೆನ್ಸ್ ನಡೆಸುತ್ತಿರುವ ಸಹೋದರರಾದ ಶಫಿ ಮತ್ತು ಅಲಿ, ಮೊಘುಲಿಯಾ ಅವರೊಂದಿಗೆ ಯಾವುದೇ ರಕ್ತ ಸಂಬಂಧವಿಲ್ಲದಿದ್ದರೂ ಅವರ ಅಂತಿಮ ವಿಧಿಗಳನ್ನು ನಿರ್ವಹಿಸಿದರು.

ಹಿಂದೂ ಯುವಕ ಮೊಘುಲಿಯಾ ಕೆಲವು ದಿವಸಗಳಿಂದ ಅವರು ಅಸೌಖ್ಯಗೊಂಡಿದ್ದರು. ನಂತರ ಪರೀಕ್ಷೆ ಮಾಡಿದಾಗ ಕೊರೊನ ದೃಡಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗೆ ಮೊಗುಲಿಯರನ್ನು ಭಾನ್ಸುವಾಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಹಿನ್ನೆಲೆಯಲ್ಲಿ ಮೃತಪಟ್ಟಿದ್ದನು. ಯುವಕನ ಮೃತದೇಹ ಸಂಸ್ಕಾರ ಕಾರ್ಯ ಮಾಡಲು ಅವನ ಕುಟುಂಬಿಕರು ಮುಂದೆ ಬರದಿದ್ದಾಗ ಶಫಿ ಮತ್ತು ಅಲಿ ಸ್ವತಃ ಆಸಕ್ತಿ ವಹಿಸಿ, ಅಂತ್ಯಸಂಸ್ಕಾರವನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.