ಲೋಕಸಭಾ ಚುನಾವಣೆ 2024; ನಾಳೆ 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

0
249

ಸನ್ಮಾರ್ಗ ವಾರ್ತೆ

ದೇಶದಲ್ಲಿ ಲೋಕಸಭಾ ಚುನಾವಣೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಏಪ್ರಿಲ್​ 19ರಂದು ಶುಕ್ರವಾರ 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ಈ ಬಾರಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ.

ಎರಡನೇ ಹಂತ ಏಪ್ರಿಲ್ 26 ರಂದು, ಮೂರನೇ ಹಂತ ಮೇ 7 ರಂದು, ನಾಲ್ಕನೇ ಹಂತ ಮೇ 13 ರಂದು, ಐದನೇ ಹಂತ ಮೇ 20 ರಂದು, ಆರನೇ ಹಂತ ಮೇ 25 ರಂದು ಮತ್ತು ಏಳನೇ ಹಂತ ಜೂನ್ 1 ರಂದು ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

LEAVE A REPLY

Please enter your comment!
Please enter your name here