ಜೈಲಿನಲ್ಲೇ ಕೇಜ್ರಿವಾಲ್ ಹತ್ಯೆಗೆ ಸಂಚು’ – ಆಮ್ ಆದ್ಮಿ ಪಾರ್ಟಿ ಗಂಭೀರ ಆರೋಪ

0
263

ಸನ್ಮಾರ್ಗ ವಾರ್ತೆ

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಎಂ ಕೇಜ್ರಿವಾಲ್ ಬಂಧನ ಆಗಿದ್ದು ತಿಹಾರ್ ಜೈಲು ಸೇರಿದ್ದಾರೆ. ಕೇಜ್ರಿವಾಲ್​​ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಿದ್ದು ಬಿಜೆಪಿ ರಾಜಕೀಯ ಸೇಡು ತೀರಿಸಿಕೊಳ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್​​ರನ್ನು ಕಳೆದ ಮಾರ್ಚ್ 21ರಂದು ಇ.ಡಿ ಅಧಿಕಾರಿಗಳು ಬಂಧಿಸಿದ್ದರು.. ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯುತ್ತಿರುವ ಕೇಜ್ರಿವಾಲ್​ ಇದೊಂದು ರಾಜಕೀಯ ಪಿತೂರಿ ಅಂತ ಹೇಳುತ್ತಲೇ ಬಂದಿದ್ದಾರೆ. ಈ ಬೆನ್ನಲ್ಲೇ ಆಪ್​ ಸರ್ಕಾರದ ಸಚಿವೆ ಆತಿಷಿ ಮರ್ಲೇನಾ ಸಿಂಗ್ ಕೂಡ ಬಿಜೆಪಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ತಿಹಾರ್​ ಜೈಲಿನಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಕೊಲ್ಲುವ ಸಂಚು ರೂಪಿಸಲಾಗಿದೆ ಎಂದು ದೆಹಲಿಯ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಮರ್ಲೇನಾ ಸಿಂಗ್ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ದೆಹಲಿಯ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಎದುರಿಸಲಾಗದ ಬಿಜೆಪಿ ಕೇಜ್ರಿವಾಲ್​​ರನ್ನು ಜೈಲಿನಲ್ಲಿಟ್ಟು ಕೊಲ್ಲಲು ಸಂಚು ರೂಪಿಸಿದೆ ಎಂದವರು ಹೇಳಿದ್ದಾರೆ.

ಕೇಜ್ರಿವಾಲ್​​ಗೆ ಟೈಪ್​-2 ಡಯಾಬಿಟಿಸ್ ಇದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಜೈಲಿನಲ್ಲಿ ಪದೇ ಪದೆ ಮನವಿ ಮಾಡಿದ್ರೂ ಇನ್ಸುಲಿನ್ ಕೊಡದೇ ಅವರನ್ನು ಕೊಲ್ಲುವ ಷಡ್ಯಂತ್ರ ರೂಪಿಸಲಾಗಿದೆ ಎಂದು ಆತಿಷಿ ಕಿಡಿಕಾರಿದ್ದಾರೆ. ಅರವಿಂದ್ ಕೇಜ್ರಿವಾಲ್ ತೀವ್ರ ಡಯಾಬಿಟಿಸ್ ಹೊಂದಿದ್ದು ಕಳೆದ 30 ವರ್ಷಗಳಿಂದ ಅವರಿಗೆ ಈ ಸಕ್ಕರೆ ಕಾಯಿಲೆ ಇದೆ.. ಕೇಜ್ರಿವಾಲ್ ಶುಗರ್ ಕಂಟ್ರೋಲ್​​​ನಲ್ಲಿಡಲು ಪ್ರತಿದಿನ 46ರಿಂದ 54 ಯುನಿಟ್​​ವರೆಗೆ ಇನ್ಸುಲಿನ್ ಪಡೆಯುತ್ತಾರೆ. ಯಾವುದೇ ವೈದ್ಯರನ್ನು ಕೇಳಿ 54 ಯುನಿಟ್ ಇನ್ಸುಲಿನ್ ಪಡೆಯುವ ವ್ಯಕ್ತಿ ತೀವ್ರ ಡಯಾಬಿಟಿಸ್​ ಎದುರಿಸುತ್ತಿರುವ ವ್ಯಕ್ತಿ ಅಂತ ಹೇಳಿದ್ದಾರೆ.

ಈ ಆರೋಪವನ್ನು ಇ.ಡಿ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಕೇಜ್ರಿವಾಲ್ ಮಾವಿನಹಣ್ಣು ಹಾಗೂ ಸಿಹಿತಿಂಡಿಗಳನ್ನ ಹೆಚ್ಚಾಗಿ ತಿನ್ನುತ್ತಾರೆ ಜೊತೆಗೆ ಸಕ್ಕರೆ ಇರುವ ಚಹಾ ಕೂಡ ಸೇವಿಸ್ತಾರೆ, ಹೀಗಾಗಿ ಅವರಿಗೆ ಶುಗರ್ ಲೆವೆಲ್ ಹೆಚ್ಚಾಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here