ಲಂಡನ್,ಜೂ.7: ಅಮೆರಿಕದ ಅಧ್ಯಕ್ಷ 20ನೆ ಶತಮಾನದ ಫ್ಯಾಶಿಸ್ಟ್ಗಳಲ್ಲಿ ಒಬ್ಬರು ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಹೇಳಿದರು. ಅಮೆರಿಕ ಅಧ್ಯಕ್ಷರು ಪ್ಯಾಶಿಸ್ಟ್ ಭಾಷೆಯಲ್ಲಿ ಮಾತಾಡುತ್ತಿದ್ದಾರೆ ಎಂದು ಗಾರ್ಡಿನ್ ಪತ್ರಿಕೆಗೆ ಬರೆದ ಲೇಖನಲ್ಲಿ ಖಾನ್ ಟ್ರಂಪ್ ವಿರುದ್ಧ ಕಟುವಾದ ಆರೋಪ ಹೊರಿಸಿದ್ದಾರೆ. ಟ್ರಂಪ್ ಪತ್ನಿ ಮೆಲಾನಿಯರ ಜೊತೆ ತ್ರಿದಿನ ಸಂದರ್ಶನಕ್ಕೆ ಸೋಮವಾರ ಬ್ರಿಟನ್ಗೆ ಬಂದಿದ್ದಾಗ ಲಂಡನ್ ಮೇಯರ್ ಅವರ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ಬರೆದಿದ್ದಾರೆ. ಜಗತ್ತಿನಾದ್ಯಂತ ಇರುವ ತೀವ್ರ ಬಲಪಂಥೀಯರು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಮೌಲ್ಯಗಳ ದಮನಕ್ಕೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಅವರು ಹೇಳಿದರು.
ಹಂಗೆರಿಯ ವಿಕ್ಟರ್ ಒರ್ಬನ್, ಇಟಲಿಯ ಮಾಟಿಯೊ ಸಾಲ್ವಿನಿ, ಫ್ರಾನ್ಸಿನ ಮರೀನ್ ಲೀಪೆನ್, ಬ್ರಿಟನ್ನ ನೈಜಲ್ ಫರಾಷ್ ಸಮಾನ ಫ್ಯಾಶಿಸ್ಟ್ ನೀತಿಯನ್ನು ಅನುಸರಿಸುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ಜಗತ್ತಿನಾದ್ಯಂತ ಅವರು ಪ್ರಭಾವವನ್ನು ಹೆಚ್ಚಿಸಿಕೊಂಡರೆಂದು ಸಾದಿಕ್ ಖಾನ್ ಬೆಟ್ಟು ಮಾಡಿದರು.












