ಚುನಾವಣೆ ಸಮಯದಲ್ಲಿ ಬಿಜೆಪಿ ಸೃಷ್ಟಿಸುವ ನಾಟಕ ಲವ್ ಜಿಹಾದ್: ಕಾಂಗ್ರೆಸ್ ನಾಯಕಿ ನಗ್ಮಾ

0
1025

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಚುನಾವಣೆಯ ಸಮಯದಲ್ಲಿ ಬಿಜೆಪಿ ಸೃಷ್ಟಿಸುವ ನಾಟಕ ಲವ್‍ ಜಿಹಾದ್ ಆಗಿದೆ ಎಂದು ನಟಿ, ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಗ್ಮ ಹೇಳಿದ್ದಾರೆ. ಚುನಾವಣೆಯು ನಡೆಯುವ ರಾಜ್ಯಗಳಲ್ಲಿ ಬಿಜೆಪಿ ಮತ್ತು ಸಂಗಡಿಗರು ಈ ಇಲ್ಲದ ಕಥೆಯೊಂದಿಗೆ ರಂಗ ಪ್ರವೇಶಿಸುತ್ತಾರೆ. ತಮ್ಮ ಹಕ್ಕುವಾದ ಸಮರ್ಥಿಸುವ ದಾಖಲೆ ಅಥವಾ ಸಾಕ್ಷ್ಯಗಳು ಇವರ ಬಳಿ ಇಲ್ಲ ಎಂದು ನಗ್ಮಾ ಟ್ವೀಟ್ ಮಾಡಿದ್ದಾರೆ.

ಲವ್‍ ಜಿಹಾದ್ ಆರೋಪಕ್ಕೆಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ ತಪ್ಪಾದ ಸೂಚನೆಗಳನ್ನು ನೀಡಿ ವಾತಾವರಣವನ್ನು ಕೆಡಿಸಿ ಹಾಕಲು ಕಾರಣವಾಗುತ್ತದೆ ಎಂದು ನಗ್ಮಾ ಹೇಳಿದರು. ಲವ್ ಜಿಹಾದ್ ಆರೋಪದ ಸುಳ್ಳನ್ನು ಬಹಿರಂಗಗೊಳಿಸಿ ಒಂದು ವೆಬ್‍ಸೈಟ್ ಪ್ರಕಟಿಸಿದ ಲೇಖನದ ಲಿಂಕ್ ಅನ್ನು ಕೂಡ ನಗ್ಮಾ ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲಿ ಎಡಪಕ್ಷದ ಮಿತ್ರ ಪಕ್ಷವಾದ ಕೇರಳ ಕಾಂಗ್ರೆಸ್ (ಎಂ) ನಾಯಕ ಜೋಸ್‍ ಕೆ ಮಾಣಿ ಚುನಾವಣೆಯನ್ನು ಮುಂದಿಟ್ಟು ಲವ್‍ ಜಿಹಾದ್ ವಿಷಯದಲ್ಲಿ ಅಭಿಪ್ರಾಯ ಪ್ರಕಟಿಸಿ ರಂಗ ಪ್ರವೇಶಸಿದ ಬೆನ್ನಿಗೆ ರಾಷ್ಟ್ರಮಟ್ಟದಲ್ಲಿ ಇದು ಚರ್ಚೆಯಾಗಿತ್ತು. ಲವ್‍ ಜಿಹಾದ್ ಒಂದು ಸಾಮಾಜಿಕ ಸಮಸ್ಯೆಯಾಗಿದೆ . ಈ ವಿಷಯದಲ್ಲಿ ಕೆಲವು ಪ್ರಕರಣಗಳನ್ನು ಸಂಬೋಧಿಸಬೇಕಾಗುತ್ತದೆ. ನಮ್ಮ ಪಾರ್ಟಿ ಖಂಡಿತ ಹಾಗೆ ಮಾಡುತ್ತದೆ. ಇಂಥದ್ದು ಸಂಭವಿಸುವುದಾದರೆ ಅದನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ದ ಪ್ರಿಂಟ್ ಆನ್‍ ಲೈನ್ ಗೆ ನೀಡಿದ ಸಂದರ್ಶನದಲ್ಲಿ ಜೋಸ್ ಕೆ.ಮಾಣಿ ಹೇಳಿದ್ದರು. ನಂತರ ಅವರು ಕೇರಳದ ಒಂದು ಟಿವಿಯ ಚ್ಯಾನೆಲ್‍ನಲ್ಲಿಯೂ ಅವರು ಹೀಗೆ ಹೇಳಿದ್ದರು.

ಲವ್‍ ಜಿಹಾದ್ ವಿಷಯದಲ್ಲಿ ತನ್ನ ಹೇಳಿಕೆ ವಿವಾದವಾದ ಬಳಿಕ ಎಡ ಪಕ್ಷಗಳ ಸರಕಾರದ ಅಭಿವೃದ್ಧಿ ಕಾರ್ಯದ ಕುರಿತ ಗಮನವನ್ನು ಬೆರೆಡೆಗೆ ಹರಿಯುವಂತೆ ಮಾಡಲು ಇಂತಹ ಪ್ರಚಾರ ನಡೆಸಲಾಗುತ್ತಿದೆ ಎಂದು ಜೋಸ್ ರಂಗ ಪ್ರವೇಶಿಸಿದ್ದರು. ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಮುಂತಾದವರು ಜೋಸ್‍ರ ಹೇಳಿಕೆಯನ್ನು ಖಂಡಿಸಿದ್ದು ಇದು ಮೂಲಭೂತವಾದಿಗಳ ಪ್ರಚಾರ ಎಂದು ಹೇಳಿದ ಮೇಲೆ ಕೇರಳ ಕಾಂಗ್ರೆಸ್ ಒಂಟಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವಿಷಯಗಳು ಚರ್ಚೆಯಾಗಬೇಕಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಪಾಲ ವಿಧಾನಸಭಾ ಕ್ಷೇತ್ರದ ಎಲ್‍ಡಿಎಫ್ ಅಭ್ಯರ್ಥಿಯಾಗಿದ್ದಾರೆ.