ಮಾಲೆಗಾಂವ್ ಸ್ಪೋಟ ಪ್ರಕರಣ: ಫೋಟೋಕಾಪಿಯನ್ನು ದ್ವಿತೀಯ ಸಾಕ್ಷ್ಯವಾಗಿ ಅನುಮತಿಸಲು ಹೈಕೋರ್ಟ್ ನಿರಾಕರಣೆ

0
596

2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋ ಕಾಪಿಗಳನ್ನು ದ್ವಿತೀಯ ಸಾಕ್ಷ್ಯವಾಗಿ ಉಪಯೋಗಿಸಲು  ಅನುಮತಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಅಮಾನ್ಯಗೊಳಿಸಿದೆ.

ಜಸ್ಟಿಸ್. ಎ.ಎಸ್ ಓಕಾ ಮತ್ತು ಜಸ್ಟಿಸ್ ಎ.ಎಸ್. ಗಡ್ಕರಿಯವರ ವಿಭಾಗೀಯ ಪೀಠವು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಲ್ಲೊಬ್ಬ ರೆನ್ನಿಸಿಕೊಂಡ ಸಮೀರ್ ಕುಲಕರ್ಣಿ ಯವರ ಅರ್ಜಿಯನ್ನು ಪರಿಶೀಲಿಸಿ ಈ ಆದೇಶವನ್ನು ನೀಡಿದೆ.

ವಿಚಾರಣಾಧೀನ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಸಮೀರ್ ಕುಲಕರ್ಣಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷ ರಾಯ ತನಿಖಾ ಏಜೆನ್ಸಿ ನ್ಯಾಯಾಲಯವು (ಎನ್‍ಐಎ) ಸಾಕ್ಷಿಗಳ ಹೇಳಿಕೆಗಳಲ್ಲಿ ಬಿಟ್ಟುಹೋದ ಹೇಳಿಕೆಗಳನ್ನು ದಾಖಲೆಗೆ ತರಲು ಸಮೀಪವಾಗುವಂತಹ ಫೋಟೊಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದ್ದನ್ನು ಪ್ರಶ್ನಿಸಿ ಸಮೀರ್ ಕುಲಕರ್ಣಿ ಹೈ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯ ವೇಳೆ ಟ್ರಯಲ್ ಕೋರ್ಟ್‍ನ ತೀರ್ಪನ್ನು ಮೇಲರ್ಜಿಯ ಮೂಲಕ ಅನುರ್ಜಿತಗೊಳಿಸಬೇಕಾದ ಅಗತ್ಯತೆ ಇಲ್ಲ. ಹಲವು  ವರ್ಷಗಳಿಂದ ಫೋಟೋಗಳನ್ನು ಆಧಾರಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಆರೋಪಿಗಳು ಕೂಡ ಫೋಟೋಗಳನ್ನು ಸಾಕ್ಷ್ಯಾಧಾರದ ರೂಪದಲ್ಲಿ  ಪ್ರಸ್ತುತ ಪಡಿಸಿದ ಪ್ರಕರಣಗಳಿವೆ ಎಂದಿತ್ತು. ಈ ಪ್ರಕರಣ ದಲ್ಲಿ ಬಳಸಿಕೊಳ್ಳಲಾದ ಫೋಟೋಗಳು ಒರಿಜಿನಲ್ ಆಗಿರುವುದಾಗಿ ತಿಳಿಸಿತ್ತು.

ಆದರೆ ಹೈಕೋರ್ಟ್ ಈ ವಾದವನ್ನು ತಳ್ಳಿ ಹಾಕಿದ್ದು ಮಾಲೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋಗಳು ನಿಖರ ವಾದವುಗಳೇ ಆಗಿದ್ದರೂ ಕೂಡ ಈ ಫೋಟೋಗಳನ್ನು ಯಾರು ತೆಗೆದರು? ಫೋಟೋ ತೆಗೆದ  ವ್ಯಕ್ತಿ ಯಾರಾಗಿದ್ದರು? ಅವರನ್ನು ಪರಿಶೀಲಿಸಲಾಗಿತ್ತೇ? ಈ ಫೋಟೋಗಳನ್ನು ತೆಗೆದ ವ್ಯಕ್ತಿಯ ಕುರಿತಾದ ಮಾಹಿತಿಗಳನ್ನು ವಿಚಾರಣಾಧೀನ ನ್ಯಾಯಾಲಯವು ಪರಿಶೀಲಿಸಿ ದೆಯೇ? ಎಂದು ಪ್ರಶ್ನಿಸಿತ್ತು.

2016ರ ಏಪ್ರಿಲ್‍ನಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‍ನ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರು 13 ಸಾಕ್ಷಿ ಹೇಳಿಕೆಗಳನ್ನು ಒಳಗೊಂಡಂತೆ ಮೂಲ ದಾಖಲೆಗಳು, ಮತ್ತು ಎಂಸಿ ಒಸಿಎ ಅಡಿಯಲ್ಲಿ ದಾಖಲಿಸಲಾದ ಆರೋಪಿಗಳ ಎರಡು ಹೇಳಿಕೆಗಳು ಪತ್ತೆಯಾಗಿರಲಿಲ್ಲ.  ಆದರೆ ಜನವರಿ, 2017ರಲ್ಲಿ ವಿಚಾರಣಾ ನ್ಯಾಯಾಲಯವು ಕಾಣೆಯಾದ ದಾಖಲೆಗಳನ್ನು ಪತ್ತೆ ಹಚ್ಚಲು ಅವುಗಳ ಬದಲಿಗೆ ದ್ವಿತೀಯ ಸಾಕ್ಷ್ಯವಾಗಿ ಲಭ್ಯವಿರುವ ಫೋಟೊಗಳನ್ನು ಬಳಸಿಕೊಳ್ಳಲು ಎನ್‍ಐಎಗೆ ಅನುಮತಿ ನೀಡಿತ್ತು. ಆದರೆ ಆರೋಪಿ ಸಮೀರ್ ಕುಲಕರ್ಣಿ,  “ಮೂಲ ಹೇಳಿಕೆ ಗಳಿಗೆ ಸಂಬಂಧಿಸಿದಂತೆ ಪ್ರಕಟಿಸಲಾ ಗುವ ಫೋಟೋಗಳು ಅಧಿಕೃತ ದಾಖಲೆ ಗಳಿಗೆ ಸಮಾನವಾಗಲು ಹೇಗೆ ಸಾಧ್ಯ  ಎಂದು ಪ್ರಶ್ನಿಸಿದ್ದರು.