2024ರ ಚುನಾವಣೆಯ ಗತಿಯನ್ನು ನಿರ್ಣಯಿಸುವುದು ಮಮತಾ ಆಗಿರಬಹುದು: ಶತ್ರುಘ್ನ ಸಿನ್ಹಾ

0
206

ಸನ್ಮಾರ್ಗ ವಾರ್ತೆ

ಕೊಲ್ಕತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮಮತಾ ಬ್ಯಾನರ್ಜಿ 2024ರ ಲೋಕಸಭಾ ಚುನಾವಣೆಯ ಗತಿ ನಿರ್ಣಯಿಸಲಿದ್ದಾರೆ ಎಂದು ಸಂಸದ ಶತ್ರುಘ್ನ ಸಿನ್ಹಾ ಹೇಳಿದರು. ಮಮತಾ ಬ್ಯಾನರ್ಜಿ ತನಗೆ ವಿಶ್ವಾಸ ಇದೆ. ಅವರು ಎಲ್ಲರೂ ಗೌರವಿಸುವ ನಾಯಕಿಯಾಗಿದ್ದಾರೆ ಎಂದು ಸಿನ್ಹಾ ಹೇಳಿದರು.

ಪ್ರಜಾಪ್ರಭುತ್ವ ತೊರೆದು ಬಿಜೆಪಿ ಸ್ವೇಚ್ಛಾಧಿಪತ್ಯದ ಪಾರ್ಟಿ ಆಗಿದ್ದರಿಂದ ಬಿಜೆಪಿಗೆ ತೊರೆದು ಈಗ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದೇನೆ. ಅಟಲ್ ಬಿಹಾರಿ, ವಾಜಪೇಯಿ, ಎಲ್‍ಕೆ ಅಡ್ವಾಣಿಯವರ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿತ್ತು. ಪ್ರಧಾನಿ ಆಳುವ ಇಂದಿನ ಬಿಜೆಪಿ ಒಂದು ಸರ್ವಾಧಿಕಾರಿ ಪಾರ್ಟಿಯಾಗಿದೆ ಎಂದು ವಾಜಪೇಯಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಶತ್ರುಘ್ನ ಸಿನ್ಹಾ ಹೇಳಿದರು.

ಎಲ್‍ಕೆ ಅಡ್ವಾಣಿ ಒತ್ತಾಯಿಸಿದ್ದರಿಂದ ತಾನು ಚುನಾವಣೆಯಲ್ಲಿ ಸ್ಪರ್ಧಿಸಿದೆ. ಸಾಮಾಜಿಕ ಹೊಣೆಗಾರಿಕೆ ನಿರ್ವಹಣೆಗಾಗಿ ರಾಜಕೀಯಕ್ಕೆ ಬಂದೆ. ನನ್ನನ್ನು ಹೆಚ್ಚು ಆಕರ್ಷಿಸಿದವರು ಜಯಪ್ರಕಾಶ್ ನಾರಾಯಣ್ ಎಂದು ಅವರು ಹೇಳಿದರು.