ಫ್ಯಾಶಿಸ್ಟ್ ಗಳ ಮುಂದೆ ಅಡ್ಜೆಸ್ಟ್ ಮೆಂಟ್‍ಗೆ ಸಿದ್ಧನಿಲ್ಲ- ನಟ ಮಾಮು ಕೋಯ

0
968

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಫೆ. 21: ಫ್ಯಾಶಿಸ್ಟ್ ಗಳೊಂದಿಗೆ ಅಡ್ಜೆಸ್ಟ್ ಮೆಂಟ್‍ ಮಾಡಿಕೊಂಡು ಬದುಕಲು ಸಿದ್ಧನಿಲ್ಲ ಎಂದು ಕೇರಳ ಹಿರಿಯ ಸಿನೆಮಾ ನಟ ಮಾಮುಕೋಯ ಹೇಳಿದ್ದಾರೆ. ಜೀವಭೀತಿಯಿರುವವರು ಫ್ಯಾಶಿಸ್ಟ್ ಗಳ ಜೊತೆ ಸೇರುತ್ತಾರೆ. ವಿರೋಧ ವ್ಯಕ್ತಪಡಿಸುವ ಕಲಾವಿದರು, ಬರಹಗಾರರನ್ನು ಫ್ಯಾಶಿಸ್ಟ್ ಗಳು ಕೊಲೆ ಮಾಡುತ್ತಾರೆ. ನನಗೂ ಚಿಲ್ಲರೆ ಬೆದರಿಕೆಗಳು ಬಂದಿವೆ. ಅಂತಹ ಬೆದರಿಕೆಗಳ ಮುಂದೆ ಮೊಣಕಾಲೂರುವುದಿಲ್ಲ ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಕಾನೂನು ಹಿಂಪಡೆಯಬೇಕೆಂದು ಆಗ್ರಹಿಸಿ ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮಿತಿ ಕಲ್ಲಿಕೋಟೆಯಲ್ಲಿ ಆಯೋಜಿಸಿದ್ದ ಶಾಹಿನ್ ಬಾಗ್ ಸ್ಕ್ವೇರ್ ನಲ್ಲಿ ಅವರು ಮಾತಾಡುತ್ತಿದ್ದರು.