ಉತ್ತರ ಪ್ರದೇಶದಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳ ಹೆಸರು ಬದಲಾವಣೆ: ಪ್ರಯಾಗ್ ರಾಜ್ ನ ಮುಂದುವರಿದ ಭಾಗ

0
676

ಸನ್ಮಾರ್ಗ ವಾರ್ತೆ

ಅಲಹಾಬಾದ್, ಫೆ. 21: ಉತ್ತರಪ್ರದೇಶದಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳ ಹೆಸರನ್ನು ರಾಜ್ಯ-ಕೇಂದ್ರ ಸರಕಾರ ಬದಲಾಯಿಸಿದೆ. ಅಲಹಾಬಾದ್‍ನ ನಾಲ್ಕು ನಿಲ್ದಾಣಗಳನ್ನು ಪರಂಪರಾಗತ ಹೆಸರಿನಲ್ಲಿ ಕರೆಯುವ ಉದ್ದೇಶದಿಂದ ಹೆಸರು ಬದಲಾಯಿಸಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ. ಅಲಹಾಬಾದ್ ಇನ್ನು ಮುಂದೆ ಪ್ರಯಾಗ್ರಾಜ್ ಜಂಕ್ಷನ್, ಅಲಹಾಬಾದ್ ಸಿಡಿ-ಪ್ರಯಾಗ್‍ರಾಜ್ ರಾಂಭಾಗ್, ಅಲಹಾಬಾದ್ ಚೆಯೋಕಿ-ಪ್ರಯಾಗ್‍ರಾಜ್ ಚೆಯೋಕಿ, ಪ್ರಯಾಗ್‍ರಾಜ್ ಘಾಟ್-ಪ್ರಯಾಗ್‍ರಾಜ್ ಸಂಘ ಎಂದು ಹೆಸರು ಬದಲಾಯಿಸಲಾಗಿದೆ.

ಈ ಹಿಂದೆ ಅಲಹಾಬಾದ್ ನಗರದ ಹೆಸರನ್ನು ಉತ್ತರಪ್ರದೇಶ ಯೋಗಿ ಆದಿತ್ಯನಾಥ ಸರಕಾರ ಬದಲಾಯಿಸಿ ಪ್ರಯಾಗ್ ರಾಜ್ ಎಂದಿರಿಸಿತ್ತು. ಇದರ ನಂತರ ಈಗ ರೈಲ್ವೆ ನಿಲ್ದಾಣಗಳ ಹೆಸರನ್ನು ಬದಲಾಯಿಸಲಾಗಿದೆ.