ಭಾರತದ ಮೇಲೆ ಕೆಟ್ಟ ದೃಷ್ಟಿ ಬೀರುವವರಿಗೆ ತಕ್ಕ ಪಾಠ ಕಲಿಸಿದ್ದೇವೆ: ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ

0
727

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ ಜೂ.28: “ಲಡಾಖ್‌ನಲ್ಲಿ ನಮ್ಮ ಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದವರಿಗೆ ನಮ್ಮವೀರ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಮನ್ ಕಿ ಬಾತ್‌’ನಲ್ಲಿ ಲಡಾಖ್ ಬಿಕ್ಕಟ್ಟಿನ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದರು.

ಭಾರತದ ಮೇಲೆ ಕೆಟ್ಟ ದೃಷ್ಟಿ ಬೀರುವವರಿಗೆ ನಾನು ಕಣ್ಣಲ್ಲಿ ಕಣ್ಣಿಟ್ಟು ಪ್ರತ್ಯುತ್ತರ ನೀಡುವುದನ್ನು ಚೆನ್ನಾಗಿ ಬಲ್ಲೆವು ಎಂದು ಅವರು ಚೀನಾವನ್ನು ಕುಟುಕಿದರು.

ದೇಶದ ಸಂರಕ್ಷಣೆ ಸೈನಿಕರು ಸದಾ‌ಸಜ್ಜಾಗಿದ್ದು ಹುತ್ಮಾತರ ಹೆತ್ತವರು ತಮ್ಮ‌ಮಕ್ಕಳನ್ನು ಸೇನಾ ಸೇವೆಗೆ ಸಜ್ಜುಗೊಳಿಸುವ ದೇಶ ನಮ್ಮದು ಎಂದು ಅವರು ಯೋಧರ ತ್ಯಾಗಜೀವನವನ್ನು ಉದ್ದೇಶಿಸಿ ಹೇಳಿದರು.

ಲಾಕ್ ಡೌನ್ ನಂತರ ಸಡಿಲಿಕೆಯು ಹಂತಹಂತವಾಗಿ ಜಾರಿಗೊಳಿಸಲಾಗುತ್ತಿದ್ದು, ಸ್ವಯಂ ರಕ್ಷಣೆಗೆ ಮುಖಕವಚ ಮತ್ತು ಇತರೆ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರಧಾನಿ ಕರೆ ನೀಡಿದರು. ಆರ್ಥಿಕತೆಯು ಕೊರೋನಾ ಕಾಲದ ನಡುವೆಯೂ ಪ್ರಮುಖವಾಗಿರುವುದರಿಂದ, ಕಲ್ಲಿದ್ದಲು ಗಣಿಗಳ ಮೇಲಿದ್ದ ಲಾಕ್‌ಡೌನ್ ಹಿಂಪಡೆಯಲಾಗಿದ್ದು, ಹರಾಜು ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಪುನರ್ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ನರಸಿಂಹರಾವ್ ರವರನ್ನು ನೆನೆದ ಅವರು ಅವರ ಜೀವನದ ಕುರಿತು ಉಲ್ಲೇಖಿಸಿದರಲ್ಲದೇ, ನರಸಿಂಹರಾವ್‌ರವರ ಕುರಿತು ಇತಿಹಾಸದ ಪುಟಗಳಿಂದ ಓದಿ ತಿಳಿದುಕೊಳ್ಳಬೇಕೆಂಬ ಆಶಾಭಾವದ ಕರೆ ನೀಡಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.