ಪತ್ನಿಯನ್ನು ಕೊಂದು ಮೃತದೇಹದ ಬಳಿ ಕೂತು ಮೊಬೈಲ್ ಗೇಮ್ ಆಡಿದ ಪತಿ!

0
322

ಸನ್ಮಾರ್ಗ ವಾರ್ತೆ

ಜೋಧ್‍ಪುರ: ರಾಜಸ್ಥಾನದಲ್ಲಿ ಪತ್ನಿಯನ್ನು ಇರಿದು ಕೊಂದ ನಂತರ ಪತಿಯು ಮೃತದೇಹದ ಬಳಿಯೇ ಕೂತು ಮೊಬೈಲ್ ಗೇಮ್ ಆಡಿದ ಘಟನೆಯು ಜೋಧಪುರದಲ್ಲಿ ನಡೆದಿದೆ.

ರಾತ್ರೆ ಆರೋಪಿ ವಿಕ್ರಮ್ ಸಿಂಗ್(35) ತನ್ನ ಪತ್ನಿ ಶಿವ್ ಕನ್ವರ್(30)ಳೊಂದಿಗೆ ಜಗಳ ಮಾಡಿದ್ದಾನೆ. ನಂತರ ಪತ್ನಿಯನ್ನು ಕೊಲೆ ಮಾಡಿ ಮೊಬೈಲ್‍ನಲ್ಲಿ ಗೇಮ್ ಆಡುತ್ತಿದ್ದ ಪೊಲೀಸರು ತಿಳಿಸಿದ್ದಾರೆ.

ಕೊಲೆ ಕೃತ್ಯವನ್ನೆಸಗಿದ ನಂತರ ಆರೋಪಿಯೇ ಪೊಲೀಸರಿಗೆ ಮತ್ತು ಸಂಬಂಧಿಕರಿಗೆ ಫೋನ್ ಮಾಡಿ ತಿಳಿಸಿದ್ದು, ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದಾಗ ರಕ್ತದ ಮಡುವಿನಲ್ಲಿ ಪತ್ನಿಯ ಮೃತ ದೇಹ ಇತ್ತು. ವಿಕ್ರಂ ಬಳಿ ಕೂತು ಮೊಬೈಲ್‍ನಲ್ಲಿ ಆಡುತ್ತಿದ್ದನು.

ಸಿಂಗ್ ಕೆಲಸಕ್ಕೆ ಹೋಗದ್ದರಿಂದ ಮನೆಯಲ್ಲಿ ಆಗಾಗ ಜಗಳ ಆಗುತ್ತಿತ್ತೆಂದು ಪೊಲೀಸರು ಹೇಳಿದ್ದು, ಪತ್ನಿ ಮನೆಯಲ್ಲಿಯೇ ಹೊಲಿಗೆ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದಳು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.