ರೈತರ ಮುಂದೆ ಕೇಂದ್ರ ಸರಕಾರದಿಂದ ಹೊಸ ಪ್ರಸ್ತಾವನೆ: ಐದು ಅಂಶಗಳು

0
552

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.9: ರೈತ ಕಾನೂನು ವಿರುದ್ದ ಪ್ರತಿಭಟನಾ ನಿರತರಾಗಿರುವ ರೈತರ ಮುಂದೆ ಕೇಂದ್ರ ಸರಕಾರ ಐದು ಅಂಶಗಳ ಸೂಚನೆಗಳನ್ನು ಪ್ರಸ್ತಾವಿಸಿದ್ದು ಈ ವಿಷಯದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವೆವು ಎಂದು ರೈತ ಸಂಘಟನೆಗಳು ತಿಳಿಸಿವೆ. ಕಳೆದ ದಿನ ಗೃಹ ಸಚಿವ ಅಮಿತ್ ಶಾ ಮತ್ತು ರೈತ ಸಂಘಟನೆಗಳ ನಡುವೆ ಚರ್ಚೆ ವಿಫಲವಾದ್ದರಿಂದ ಈ ಹೊಸ ಸೂಚನೆಗಳನ್ನು ಕೇಂದ್ರ ಸರಕಾರ ಮುಂದಿಟ್ಟಿದೆ.

ಬೆಂಬಲ ಬೆಲೆ, ಜಮೀನಿನಲ್ಲಿ ರೈತರ ಹಕ್ಕು ಸಂರಕ್ಷಣೆ, ಸರಕಾರ ನಿಯಂತ್ರಣದ ರೈತ ಮಾರುಕಟ್ಟೆ ಸಂತೆ ಮುಂದುವರಿಯುವುದು. ರೈತ ಮಾರಾಟ ಸಂತೆಗಳಲ್ಲಿ ಮತ್ತು ಹೊರಗೆ ಒಂದೇ ತೆರಿಗೆ ಕೇಂದ್ರ ಸರಕಾರದ ಪ್ರಧಾನ ತಿದ್ದುಪಡಿಗಳಾಗಿವೆ.

ಅಮಿತ್ ಶಾರೊಂದಿಗೆ ನಿನ್ನೆ ರೈತ ನಾಯಕರು ಚರ್ಚಿಸಿದ್ದು ಕಾನೂನು ರೈತ ಸಂಘಟನೆಗಳು ಹಿಂತೆಗೆದುಕೊಳ್ಳಿ ಎಂದಿದ್ದವು. ರೈತ ಸಂಘಟನೆಗಳ ದೃಢ ನಿಲುವಿನಿಂದಾಗಿ ಚರ್ಚೆ ವಿಫಲವಾಗಿತ್ತು.