ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡುವ ಆಸೆ: 12 ವರ್ಷ ತಲೆಮರೆಸಿಕೊಂಡ ಕೊಲೆ ಪ್ರಕರಣದ ಅಪರಾಧಿ ಕೊನೆಗೂ ಶರಣು

0
263

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಂಜಯ್ ತೇಜ್ ಜೈಲಿನಿಂದ ಪರೋಲ್‍ನಿಂದ ಹೊರಬಂದಾಗ ಒಂದೆ ಗುರಿಯಿತ್ತು. ತನ್ನ ಹೆಣ್ಣು ಮಕ್ಕಳನ್ನು ಕಲಿಸುವುದು. ಪರೋಲ್ ಅವಧಿ ಮುಗಿದರೂ ಆತ ಜೈಲಿಗೆ ಮರಳಲಿಲ್ಲ. ಹಲವು ಕಡೆ ಅಡಗಿ ಜೀವನ ನಡೆಸಿ ಕೊನೆಗೆ ಗುರಿ ಮುಟ್ಟಿದ ಮೇಲೆ ಸಂಜಯ್ ಸಿಂಗ್ ಜೈಲಿಗೆ ಮರಳಿದ್ದಾನೆ.

ತನ್ನ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಂಜಯ್ ಸಿಂಗ್ ತಲೆಮರೆಸಿಕೊಂಡಿದ್ದು, ಹನ್ನೆರಡು ವರ್ಷ ಅಡಗಿ ಕೂತು ತನ್ನ ಮಕ್ಕಳು ಹತ್ತನೇ ತರಗತಿಯಲ್ಲಿ ಉನ್ನತ ಅಂಕ ಗಳಿಸಿ ಪಾಸಾದ ನಂತರ ಅಧಿಕಾರಿಗಳನ್ನು ಹುಡುಕಿ ಜೈಲಿಗೆ ಮರಳಿದ್ದಾನೆ.

2003ರ ಒಂದು ಕೊಲೆ ಪ್ರಕರಣದಲ್ಲಿ ತಂದೆ ಇಬ್ಬರು ಸಹೋದರರ ಜೊತೆ ಸಂಜಯ್ ಸಿಂಗ್ ಬಂಧಿಸಲ್ಪಟ್ಟಿದ್ದನು. 2005ರಲ್ಲಿ ಜೀವಾವಧಿ ಜೈಲು ಶಿಕ್ಷೆಯೂ ಆಯಿತು. ಅಪರಾಧಿಗೆ ಎರಡು ಬಾರಿ ಪರೋಲ್‍ ಕೂಡ ಸಿಕ್ಕಿತ್ತು. ಹೆಣ್ಣು ಮಕ್ಕಳಾದ ಶ್ರದ್ಧಾ ಮತ್ತು ಶ್ರುತಿ ಜನಿಸಿದ ಬೆನ್ನಲ್ಲೇ ಜೈಲು ಶಿಕ್ಷೆಯಿಂದ ವಿನಾಯಿತಿ ಕೊಡಬೇಕೆಂಬ ಆತನ ಮನವಿಯನ್ನು ಹೈಕೋರ್ಟು ತಿರಸ್ಕರಿಸಿತ್ತು. ನಂತರ ತಪ್ಪಿಸಿಕೊಳ್ಳಲು ನಿರ್ಧರಿಸಿದ್ದ. ಕೊನೆಗೆ ಪರೋಲ್‍ನಲ್ಲಿ ಮೆನೆಗೆ ಮರಳಿದ ಆತ ಬಳಿಕ ಜೈಲಿಗೆ ಮರಳಲಿಲ್ಲ. ಮಕ್ಕಳ ಕಲಿಕೆಗಾಗಿ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ಸೇರಿಕೊಂಡ. ನಂತರ ಪೊಲೀಸರ ಕಣ್ಣುತಪ್ಪಿಸಿ ಬದುಕು ಸಾಗಿತು.

ಹೀಗೆ ಹನ್ನೆರಡು ವರ್ಷದವರೆ ತಲೆಮರೆಸಿಕೊಂಡು ಬದುಕಿದ ಆತ ನಡುವೆ ರಜಾದಿನಗಳಲ್ಲಿ ಅಡಗಿ ಅಡಗಿ ಕುಟುಂಬವನ್ನು ಭೇಟಿಯಾಗಿ ಹೋಗುತ್ತಿದ್ದ. ಮಕ್ಕಳು ಹತ್ತನೇ ತರಗತಿ ಪಾಸಾದ ಮೇಲೆ ಜೈಲಿಗೆ ಮರಳಲು ತೀರ್ಮಾನಿಸಿದನು. ಎಸೆಸ್ಸೆಸಿ ಪರೀಕ್ಷೆಯಲ್ಲಿ ಶ್ರದ್ಧಾ ಶೇ.86 ಮತ್ತು ಶ್ರುತಿ ಶೇ. 83 ಮಾರ್ಕುಗಳಿಸಿ ತೇರ್ಗಡೆಯಾಗಿದ್ದಾರೆ.
ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆಂಬ ಸಂಜಯ್‌ ಬಯಕೆಗೆ ಕೆಲವು ಸಂಘಟನೆಗಳು ಸಹಾಯ ಒದಗಿಸುವ ಭರವಸೆ ಕೊಟ್ಟಿವೆ. ಉನ್ನತ ದರ್ಜೆಯಲ್ಲಿ ಪಾಸಾದ ಮಕ್ಕಳನ್ನು ಸನ್ಮಾನಿಸುವಾಗ ಅದರಲ್ಲಿ ಶ್ರದ್ಧಾ, ಶ್ರುತಿ ಇದ್ದರು.

ಬಹಳ ಕಾಲ ಅಡಗಿರಲು ಸಾಧ್ಯವಾದ್ದರಿಂದ ಇನ್ನು ಜೈನ್‍‌ಗೆ ಪರೋಲ್, ಇತರ ರಜೆಗಳು ಸಿಗುವುದಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಶಿಕ್ಷೆಯ ಅವಧಿ ಮುಗಿಸಿ ಮರಳುವ ತೇಜ್‌ರನ್ನು ಸ್ವಾಗತಿಸಲು ಪತ್ನಿ ಮಕ್ಕಳು ಕಾಯುತ್ತಿದ್ದಾರೆ.