ಮನೆ ಸ್ವಚ್ಛ ಗೊಳಿಸಿದ ಸ್ವಯಂಸೇವಕರಿಗೆ ಧನ್ಯವಾದ ಹೇಳುತ್ತಿರುವ ಮನೆಯೊಡತಿ: ವೈರಲ್ ವಿಡಿಯೋ

0
1121

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಅಂಗಸಂಸ್ಥೆಯಾದ ಎಚ್ ಆರ್ ಎಸ್ ನ 60 ಕಾರ್ಯಕರ್ತರ ತಂಡವು ಕೆಲವು ದಿನಗಳ ಹಿಂದೆಯೇ ನೆರೆ ಪೀಡಿತ ಕೇರಳದಲ್ಲಿ ಸೇವಾ ಕಾರ್ಯಗಳಲ್ಲಿ ನಿರತವಾಗಿದ್ದು, ಈವರೆಗೆ ನೂರರಷ್ಟು ಮನೆಗಳು, ಅಂಗಡಿಗಳು, ಮದರಸ, ಗ್ರಾಮ ಪಂಚಾಯತ್ ಕಟ್ಟಡ,ಧಾರ್ಮಿಕ ಕಟ್ಟಡಗಳು, ರಸ್ತೆಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕೈಗೊಂಡಿತು. ಈ ಸಂದರ್ಭದಲ್ಲಿ ಮನೆಯವರು ಎಚ್ ಆರ್ ಎಸ್ ಕಾರ್ಯಕರ್ತರ ಸಹಾಯಕ್ಕೆ ಧನ್ಯವಾದ ಸಲ್ಲಿಸಿದ ಹಾಗು ನೆರೆಯಿಂದ ನಾಶವಾಗಿದ್ದ ವಿಧವೆಯೋರ್ವರಿಗೆ ಗುಡಿಸಲಿನ ಪುನರ್ ನಿರ್ಮಾಣದ ಬಳಿಕ ಕೃತಜ್ಞತೆ ಸಲ್ಲಿಸಿದುದನ್ನು ಈ ವಿಡಿಯೋದಲ್ಲಿ ಇಲ್ಲಿ ಕಾಣಬಹುದು.