ಮಂಗಳೂರು ಗಾಂಜಾ ಜಾಲ: ಮುಂದುವರಿದ ಪೊಲೀಸ್ ಬೇಟೆ!

0
409

ಸನ್ಮಾರ್ಗ ವಾರ್ತೆ

ಮಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಪ್ಯಾಥೊಲಜಿ ಎಂ.ಡಿ ಮಾಡುತ್ತಿರುವ ತುಮಕೂರು ಮೂಲದ ಹರ್ಷ ಕುಮಾರ್, ಡಿಫಾರ್ಮ ವಿದ್ಯಾರ್ಥಿ ಕೇರಳದ ಕೊಚ್ಚಿನ್ ಮೂಲದ ಕಸ್ಬ ಅಡುನ್ ದೇವ್ ಮತ್ತು ಮಂಗಳೂರು  ಕಸ್ಬ ಬೆಂಗ್ರೆ ನಿವಾಸಿ, ಹಣ್ಣುಹಂಪಲು ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುವ ಮುಹಮ್ಮದ್ ಅಫ್ರಾರ್(23) ಬಂಧಿತ ಆರೋಪಿಗಳು.

ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಜಾಲವೊಂದನ್ನು ಭೇದಿಸಿರುವ ಮಂಗಳೂರು ಪೊಲೀಸರು ನಗರದ ಪ್ರತಿಷ್ಠಿತ 2 ವೈದ್ಯಕೀಯ ಕಾಲೇಜಿನ ಇಬ್ಬರು ವೈದ್ಯರು, 7 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ನಿನ್ನೆಯಷ್ಟೇ ಬಂಧಿಸಿದ್ದರು. ಈ ಪೈಕಿ ನಾಲ್ವರು ಯುವತಿಯರೂ ಸೇರಿದ್ದಾರೆ. ಓರ್ವ ಯು.ಕೆ. ಮೂಲದ ಸಾಗರೋತ್ತರ ಭಾರತೀಯ ಪ್ರಜೆಯಾಗಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿಸಿರುವ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.