ನೀರಿನ ಕೊರತೆ: ಮಂಗಳೂರಿನ ಮುಸ್ಲಿಮರಿಂದ ಮಳೆಗಾಗಿ ನೆಹರೂ ಮೈದಾನದಲ್ಲಿ ವಿಶೇಷ ನಮಾಜ್, ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿ

0
1271

ಮಂಗಳೂರು: ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಮಂಗಳೂರಿನ ಜನತೆ ಮಳೆಗಾಗಿ ಚಾತಕ ಪಕ್ಷಿಯಂತೆ ಒಂದೆಡೆ ಕಾಯುತ್ತಿದ್ದರೆ, ಇನ್ನೊಂದೆಡೆ, ನಗರದ ಮುಸ್ಲಿಮರು ನೆಹರೂ ಮೈದಾನದಲ್ಲಿ ಸೇರಿ ಮಳೆಗಾಗಿ ಪ್ರಾರ್ಥನೆ ನಡೆಸಿದರು. ಮೊದಲು ಎರಡು ರಕ ಅತ್ ನಮಾಜ್, ಬಳಿಕ ಪ್ರವಚನ ಮತ್ತು ಕೊನೆಗೆ ದೇವನಲ್ಲಿ ಮಳೆಗಾಗಿ ಪ್ರಾರ್ಥಿಸಲಾಯಿತು. ಪ್ರವಾದಿ ಮುಹಮ್ಮದರು ಮಳೆಗಾಗಿ ಪ್ರಾರ್ಥಿಸಿರುವುದನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಸಂಘಟಕರು ಮಾಧ್ಯಮದವರಿಗೆ ವಿವರಿಸಿದರು.

ಕುದ್ರೋಳಿಯ ಸಲಫಿ ಮಸೀದಿಯ ಖತೀಬ್ ಮುಹಮ್ಮದ್ ಶೇಖ್ ಸಾಖಿಬ್ ಸಲೀಂ ಉಮ್ರಿಯವರು ಮಳೆ ನಮಾಜ್ ಗೆ ನೇತೃತ್ವ ನೀಡಿದರು.

ಶಾಸಕ ವೇದವ್ಯಾಸ ಕಾಮತ್ ಅವರು ಪ್ರಾರ್ಥನೆಯ ವೇಳೆ ಉಪಸ್ಥತರಿದ್ದರು. ಪುರುಷರೂ ಮಹಿಳೆಯರೂ ಸೇರಿದಂತೆ ಸಾವಿರದಷ್ಟು ಮಂದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.