ಪ.ಬಂಗಾಳದಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟುವ ಸ್ಥಿತಿಯಿದೆ ಎಂದು ಆರೋಪಿಸಿದ ಬಿಜೆಪಿಗೆ ‘ಅಮಿತ್ ಶಾ ಏನು ದೇವರೇ?’ಎಂದು ಪ್ರಶ್ನಿಸಿದ ಮಮತಾ

0
516

ಕೊಲ್ಕತಾ,ಮೇ 15: ಪಶ್ಚಿಮಬಂಗಾಳದಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟಿಸುವ ಸ್ಥಿತಿಯಲ್ಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‍ಶಾ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ರೋಡ್ ಶೋ ವಿರುದ್ಧ ಕೊಲ್ಕತಾದಲ್ಲಿ ಕಲ್ಲೆಸೆತ, ಕಪ್ಪು ಬಾವುಟ ತೋರಿಸಿದ ಘಟನೆಗೆ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಯ ವೇಳೆ ನಡೆದ ದಾಳಿಯಲ್ಲಿ 60 ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದರು. ತೃಣಮೂಲದ ಗೂಂಡಾಗಳ ಅಕ್ರಮಗಳನ್ನು ಸಹಿಸುತ್ತಿರುವ ಪಶ್ಚಿಮ ಬಂಗಾಳದ ಜನರಲ್ಲಿ ವಿಶ್ವಾಸ ಇದೆ ಎಂದು ಅಮಿತ್ ಶಾ ಹೇಳಿದರು.

ಅಮಿತ್ ಶಾರವರ ರೋಡ್ ಶೋ ವೇಳೆ ನಡೆದ ಅಹಿತಕರ ಘಟನೆಗಳಿಗೆ ಬಿಜೆಪಿ ಹೊರಗಿನಿಂದ ಕರೆ ತಂದ ಗೂಂಡಾಗಳು ಕಾರಣ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಮಿತ್‍ಶಾರಿಗೆ ತಿರುಗೇಟು ನೀಡಿದರು. ‘ಅಮಿತ್ ಶಾ ದೇವರೇ? ಯಾರೂ ಪ್ರತಿಭಟಿಸಬಾರದೆಂದರೆ ಹೇಗೆ!’ ಎಂದು ಮಮತಾ ಹೇಳಿದರು. ‘ಅಮಿತ್ ಶಾ ಯಾರು ಎಂದು ಭಾವಿಸಿಕೊಂಡಿದ್ದಾರೆ. ಅವರೆಲ್ಲದ್ದಕ್ಕಿಂತಲೂ ಮೇಲೆ ಇದ್ದಾರೆಂದು ಭಾವಿಸಿದ್ದಾರಾ? ಯಾರು ಪ್ರತಿಭಟಿಸದಿರಲು ಅಮಿತ್ ಶಾ ದೇವರೇ?’ ಎಂದು ಉತ್ತರ ಕೊಲ್ಕತಾದ ವಿದ್ಯಾಸಾಗರ್ ಕಾಲೇಜಿಗೆ ಭೇಟಿ ನೀಡಿದ ವೇಳೆ ಅವರು ಹೇಳಿದರು.

ವಿದ್ಯಾಸಾಗರ ಕಾಲೇಜಿನ ಮುಂಭಾಗದಿಂದ, ಯುನಿವರ್ಸಿಟಿ ಹಾಸ್ಟೆಲ್‍ನ ನಿಂದ ಅಮಿತ್‍ಶಾರ ವಾಹನಗಳ ಸಾಲಿಗೆ ಕಲ್ಲೆಸೆತ ನಡೆದಿತ್ತು. ಬಿಜೆಪಿ ಕಾರ್ಯಕರ್ತರು ಹಾಸ್ಟೆಲಿನ ಗೇಟ್‍ಗೆ ಬೀಗ ಹಾಕಿದರು. ಗೇಟಿನ ಹೊರಿಗೆ ಇದ್ದ ಬೈಕುಗಳಿಗೆ ಬೆಂಕಿ ಹಚ್ಚಿದ್ದಾರೆ. ಇದೇ ವೇಳೆ ಕಾಲೇಜಿನ ಮುಂದಿದ್ದ ಕಾಲೇಜು ಸಂಸ್ಥಾಪಕ ಈಶ್ವರ್ ಚಂದ್ರ ವಿದ್ಯಾಸಾಗರ್‍‌ರ ಪ್ರತಿಮೆಯನ್ನು ಬಿಜೆಪಿ ಕಾರ್ಯಕರ್ತರು ಕೆಡವಿದ್ದಾರೆ. ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ಚದುರಿಸಿದರು.