ಮಣಿಪುರ; ಆದಿವಾಸಿ ಮಹಿಳೆಯನ್ನು ಮೊಳೆ ಹೊಡೆದು, ಜೀವಂತ ಸುಟ್ಟು ಕೊಲೆ – ಮರಣೋತ್ತರ ವರದಿ

0
443

ಸನ್ಮಾರ್ಗ ವಾರ್ತೆ

ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನವೆಂಬರ್ 7 ರಂದು 31 ವರ್ಷದ ಆದಿವಾಸಿ ಬುಡಕಟ್ಟು ಮಹಿಳೆಯನ್ನು ಚಿತ್ರಹಿಂಸೆ ನೀಡಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂಬುದನ್ನು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಲಿಪಶುವನ್ನು ಮೊಳೆ ಹೊಡೆದು, ಜೀವಂತ ಸುಟ್ಟು ಆಕೆಯ ಮೇಲೆ ಕ್ರೂರ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಿದ್ದು ವರದಿಯಾಗಿದೆ.

ಜನಾಂಗೀಯ ಘರ್ಷಣೆಯಿಂದಾಗಿ ಮೃತದೇಹವನ್ನು 50 ಕಿಮೀ ದೂರದ ಸಿಲ್ಚರ್‌ನಿಂದ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.

ಮೃತ ದೇಹದ 99% ಭಾಗ ಸುಟ್ಟುಹೋಗಿದ್ದು, ಬಲ ತೊಡೆಯ ಹಿಂಭಾಗದಲ್ಲಿ ಆಳವಾದ ಗಾಯ ಮತ್ತು ಎಡ ತೊಡೆಯ ಮಧ್ಯದಲ್ಲಿ ಲೋಹದ ಮೊಳೆ ಹುದುಗಿರುವುದನ್ನು ವರದಿ ಉಲ್ಲೇಖಿಸಿದೆ. ದೇಹದ ಸ್ಥಿತಿಯ ಕಾರಣದಿಂದ ಶಸ್ತ್ರಚಿಕಿತ್ಸಾ ಪರಿಶೀಲನೆ ಮಾಡಲು ಸಾಧ್ಯವಾಗದಿದ್ದರೂ, ಕ್ರೂರ ಹಿಂಸೆಯ ಸುಳಿವು ಸಿಕ್ಕಿದೆ.

ಶಸ್ತ್ರಸಜ್ಜಿತ ಗುಂಪು 20 ಮನೆಗಳಿಗೆ ಬೆಂಕಿ ಹಚ್ಚಿದ ಬಳಿಕ ಹಮರ್ ಗ್ರಾಮವನ್ನು ನಾಶ ಮಾಡಿದ್ದು, ಆಕೆಯ ಪತಿಯಿಂದ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ, ಅತ್ಯಾಚಾರ ಮತ್ತು ಕೊಲೆಯ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.

ಕುಕಿ-ಜೋ ನಾಗರಿಕ ಸಮುದಾಯ ಮತ್ತು ಸಂಘಟನೆಗಳು ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದು, ಭದ್ರತಾ ಸಂಸ್ಥೆಗಳ ವೈಫಲ್ಯವನ್ನು ಪ್ರಶ್ನಿಸಿವೆ. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗಾಗಿ ಕರೆ ನೀಡಲಾಗಿದ್ದು, ಹಂತಕರನ್ನು ಶೀಘ್ರವೇ ಬಂಧಿಸಲು ಒತ್ತಾಯಿಸಲಾಗಿದೆ. ಸ್ಥಳೀಯ ಬುಡಕಟ್ಟು ಸಮುದಾಯಗಳು ಈ ಹಿಂಸಾಚಾರ ಮುಂದುವರಿದರೆ ಸ್ಥಿತಿಗತಿಗಳು ಮತ್ತಷ್ಟು ಕಠಿಣವಾಗುವ ಎಚ್ಚರಿಕೆಯನ್ನು ನೀಡಿವೆ.

ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರವು ಮಹಿಳೆಯರ ವಿರುದ್ಧ ನಡೆಯುತ್ತಿರುವ ದುರಂತ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ.