ಸನ್ಮಾರ್ಗ ವಾರ್ತೆ
ಚೆನ್ನೈ,ಸೆ.21: ಸಾಮಾಜಿಕ ಸುಧಾರಕ ಪೆರಿಯಾರ್ ಇವಿ ರಾಮಸ್ವಾಮಿಯವರ ಪ್ರತಿಮೆಗೆ ಚಪ್ಪಲಿ ಮಾಲೆ ಮತ್ತು ಸೆಗಣಿ ಹಾಕಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ಬಿಜೆಪಿಯ ಕಾರ್ಯಕರ್ತನ ವಿರುದ್ಧ ಧರ್ಮಪುರಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಅರೂರ್ ನಿವಾಸಿ ಕಲೈ ಅರಸನ್(24) ಎಂಬಾತ ಈ ಕುಕೃತ್ಯ ಎಸಗಿದ್ದಾನೆ. ಈತನನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಪೆರಿಯಾರ್ ಜನ್ಮದಿನಾಚರಣೆ ಕಾರ್ಯಕ್ರಮವು ತಮಿಳ್ನಾಡಿನಾದ್ಯಂತ ನಡೆಯುತ್ತಿದೆ. ಈ ವೇಳೆ ಕಲೈ ಅರಸನ್ ಪರಿಯಾರ್ರನ್ನು ಅಪಮಾನಿಸಿ ಪೋಸ್ಟ್ ಹಾಕಿದ್ದಾನೆ. ಫೇಸ್ಬುಕ್ನಿಂದ ವೀಡಿಯೊ ತೆಗೆದು ಹಾಕಿದ್ದೇವೆ ಎಂದು ಪೊಲೀಸರು ತಿಳಿಸಿದರು.












