ಮಾಸ್ಕ್ ಧರಿಸದೇ ಓಡಾಟ: ಕಾಸರಗೋಡಿನಲ್ಲಿ 128 ಮಂದಿಯ ಮೇಲೆ ಕೇಸು ಜಡಿದ ಪೊಲೀಸರು

0
478

ಸನ್ಮಾರ್ಗ ವಾರ್ತೆ

ಕಾಸರಗೋಡು,ಜೂ.5: ಮಾಸ್ಕ್ ಧರಿಸದೆ ಓಡಾಡಿದವರ ವಿರುದ್ಧ ಪೊಲೀಸರು ಕ್ರಮ ಜರಗಿಸಿದ್ದು, ಜಿಲ್ಲೆಯಲ್ಲಿ 128 ಮಂದಿಯ ಮೇಲೆ ಕೇಸು ಜಡಿದಿದ್ದಾರೆ.

ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ದರಿಸದ್ದಕ್ಕೆ ಕೇಸು ದಾಖಲಿಸಿ ದಂಡ ತೆತ್ತವರ ಸಂಖ್ಯೆ 4532ಕ್ಕೆ ತಲುಪಿದೆ. ನಿಷೇಧ ಉಲ್ಲಂಘಿಸಿ ಪ್ರಯಾಣಿಸಿದ್ದಕ್ಕಾಗಿ ಜಿಲ್ಲೆಯಲ್ಲಿ 2568 ಕೇಸುಗಳನ್ನು ಈವರೆಗೆ ದಾಖಲಿಸಲಾಗಿದೆ. 3236 ಮಂದಿ ಬಂಧನಕ್ಕೊಳಗಿದ್ದು, 1102 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಲಾಕ್‍ಡೌನ್ ನಿರ್ದೇಶ ಉಲ್ಲಂಗಿಸಿದ್ದಕ್ಕೆ ಸಂಬಂಧಿಸಿದ ಐದು ಪ್ರಕರಣಗಳು ಬುಧವಾರ ದಾಖಲಾಗಿವೆ. ಆದೂರಿನಲ್ಲಿ ಒಂದು, ಮೇಲ್ಪರಂಬದಲ್ಲಿ ಒಂದು, ಬೇಕಲ, ನೀಲೇಶ್ವರ ಚಂದೇರ ಠಾಣಾ ವ್ಯಾಪ್ತಿಯಲ್ಲಿ ಒಂದೊಂದು ಪ್ರಕರಣಗಳು ದಾಖಲಾಗಿವೆ. ಬೇರೆ ಬೇರೆ ಕೇಸುಗಳಿಗೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.