ಫೆಲಸ್ತೀನಿಯನ್ ಪತ್ರಕರ್ತೆ ಮಹ ಹುಸೈನೀ ಯವರಿಗೆ ‘ಮಾರ್ಟಿನ್ ಅಡ್ಲರ್ ಪ್ರಶಸ್ತಿ’

0
566

ಸನ್ಮಾರ್ಗ ವಾರ್ತೆ

ಗಾಝ ಸಿಟಿ,ನ.26: ಪ್ರಮುಖ ಪತ್ರಕರ್ತ ಪ್ರಶಸ್ತಿಯಾದ ಮಾರ್ಟಿನ್ ಅಡ್ಲರ್ ಪ್ರಶಸ್ತಿಗೆ ಮಿಡ್ಲೀಸ್ಟ್ ಐ ಪೋರ್ಟಲ್‍ನ ಫೆಲಸ್ತೀನಿಯನ್ ಮಹಿಳಾ ಪತ್ರಕರ್ತೆ ಮಹ ಹುಸೈನಿಯವರು ಭಾಜನರಾಗಿದ್ದಾರೆ. ರೊರಿ ಪೆಕ್ ಟ್ರಸ್ಟ್ ಲಂಡನ್‍ನ ಸ್ವೀಡನ್ ದೂತವಾಸ ಜಂಟಿಯಾಗಿ ಈ ಪ್ರಶಸ್ತಿಯನ್ನು ನೀಡುತ್ತಿದೆ. ಫೆಲಸ್ತೀನಿನ ಮುಖ್ಯ ವರದಿ ಮತ್ತು ವಿವರಗಳನ್ನು ಮಹ ವರದಿ ಮಾಡುತ್ತಿದ್ದು, ಅವರು ತೋರಿಸಿದ ಅಸಾಧಾರಣ ದಿಟ್ಟತನ, ಅರ್ಪಣಾ ಬದ್ಧತೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪತ್ರಕರ್ತ ಮತ್ತು ಪ್ರಶಸ್ತಿ ಸಮಿತಿಯ ಸದಸ್ಯ ಕ್ಲೈವ್ ಮೆಯ್ರಿ ಬಿಬಿಸಿಗೆ ತಿಳಿಸಿದರು. ಟ್ರಸ್ಟ್ ಮೌಲ್ಯಗಳನ್ನು ಪರಿಗಣಿಸಿ ದಿಟ್ಟತದ ವರದಿಗಾರಿಕೆ ಮಾಡಿದ ಓರ್ವ ಮಹಿಳೆ ಅವರು. ಎಂದೂ ವರದಿಯಾಗದಂತಹ ಸುದ್ದಿಗಳನ್ನು ಅವರು ವಾರ್ತಾ ಲೋಕದ ಮುಂದೆ ತಂದಿದ್ದಾರೆ ಎಂದು ಕ್ಲೈವ್ ಮೈರಿ ಹೇಳಿದರು.

ಪ್ರಶಸ್ತಿ ದೊರತದ್ದಕ್ಕೆ ತುಂಬ ಸಂತೋಷವಿದೆ ಎಂದು ಮಹ ಹುಸೈನಿ ಹೇಳಿದ್ದಾರೆ. ಈ ಅಭಿಮಾನದ ಪ್ರಶಸ್ತಿ ಪಡೆಯುವುದು ನನ್ನ ಮಟ್ಟಿಗೆ ತುಂಬ ಅರ್ಥವುಳ್ಳದ್ದಾಗಿದೆ. ಕಾರಣ, ಹುಟ್ಟಿನಿಂದ ನನ್ನ ಜೀವನದ ಅರ್ಧಭಾಗ ದಿಗ್ಬಂಧನ ಮತ್ತು ಕೆಲಸದಲ್ಲಿ ಕಳೆದಿದೆ. ವರದಿಗಾರಿಕೆ ಒಂದು ವೃತ್ತಿ ಎಂಬುದನ್ನು ಮೀರಿದ್ದು ಎಂದು ಅವರು ಹೇಳಿದರು.

ಧ್ವನಿಯಿಲ್ಲದವರಿಗೆ, ದಮನಗಳು, ದಿಗ್ಬಂಧನ, ಕಪ್ಪುಪಟ್ಟಿಯಲ್ಲಿರುವವರ ಧ್ವನಿಯಾಗಿ ಅಂತಹ ಕಠಿಣ ಪರಿಸ್ಥಿತಿಯಲ್ಲಿ ವರದಿಗಾರಿಕೆ ಸವಾಲಿನದಾಗಿದೆ. 2018ರಿಂದ ಮಹ ಮಿಡ್ಲೀಸ್ಟ್ ಐಗಾಗಿ ಗಾಝದಿಂದ ವರದಿ ಮಾಡುತ್ತಿದ್ದಾರೆ.