ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಪಾಪ್ ಗಾಯಕಿ ರಿಹಾನ್ನರ ಟ್ವೀಟ್ನಿಂದಾಗಿ ರೈತರ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದು ಗ್ರೇಟ್ಟಾ ಥನ್ಬರ್ಗ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರ ಸಂಬಂಧಿಕರಾದ ಮೀನಾ ಹ್ಯಾರಿಸ್ರ ಟ್ವೀಟ್ಗಳು ಕೇಂದ್ರ ಸರಕಾರವನ್ನು ಬೆಚ್ಚುವಂತೆ ಮಾಡಿದೆ.
ಮೂವರು ಮಹಿಳೆಯರ ಫೋಟೊಗಳನ್ನು ಕೇಂದ್ರ ಸರಕಾರವನ್ನು ಬೆಂಬಲಿಸುವ ಜನರ ಗುಂಪು ಸುಟ್ಟು ಹಾಕಿ ಇವರ ವಿರುದ್ಧ ಪ್ರತಿಭಟಿಸಿತ್ತು. ಭಯೋತ್ಪಾದಕ ಜನರ ಗುಂಪು ನಮ್ಮ ಫೋಟೊ ಸುಡುವುದನ್ನು ನೋಡುವಾಗ ತುಂಬ ವಿಚಿತ್ರ ಅನುಭವವಾಗುತ್ತದೆ. ನಾವು ಭಾರತದಲ್ಲಿ ಇದ್ದಿದ್ದರೆ ಅವರು ಏನು ಮಾಡುತ್ತಿದ್ದರು ಎಂದು ಯೋಚಿಸಿ ನೋಡಿ ಎಂದು ಮೀನಾ ಹ್ಯಾರಿಸ್ ಟ್ವೀಟರ್ ಮೂಲಕ ಉತ್ತರ ನೀಡಿದ್ದಾರೆ.
ನಾನು ಹೇಳುತ್ತೇನೆ-23 ವರ್ಷದ ಕಾರ್ಮಿಕ ಹಕ್ಕು ಕಾರ್ಯಕರ್ತೆ ನವದೀಪ್ ಕೌರರನ್ನು ಪೊಲೀಸರು ಬಂಧಿಸಿ ಹೊಡೆದು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. 20 ದಿವಸಗಳಿಂದ ಆಕೆಗೆ ಜಾಮೀನು ನೀಡದೆ ತಡೆದಿರಿಸಿಕೊಳ್ಳಲಾಗಿದೆ ಎಂದು ಮೀನಾ ಹ್ಯಾರಿಸ್ ಟ್ವೀಟ್ ಮಾಡಿದರು.
ರೈತರನ್ನು ಬೆಂಬಲಿಸಿದ ರೈತರ ಫೋಟೊ ಸುಟ್ಟು ಹಾಕಿದ ಪುರುಷರನ್ನು ಧೀರರೆಂದು ನಿಮ್ಮ ಬಗ್ಗೆ ಮಾಧ್ಯಮಗಳಲ್ಲಿ ಬರಬಹುದು. ಅದು ಸ್ವಾಭಾವಿಕವಾಗಿದೆ ಎಂದು ಭಾವಿಸಿದ್ದೀರಾ? ಎಂದು ಅವರು ಪ್ರಶ್ನಿಸಿದರು.
ರೈತರ ಹೋರಾಟವನ್ನು ಜಾಗತಿಕವಾಗಿ ಗಮನಸೆಳೆದ ಪಾಪ್ ತಾರೆ ರಿಹಾನ್ನ, ಹವಾಮಾನ ಕಾರ್ಯಕರ್ತೆ ಗ್ರೇಟ್ಟಾ ಟುನ್ಬರ್ಗ್ ಅವರ ಹಿಂದೆಯೇ ಮೀನಾ ಹ್ಯಾರಿಸ್ ಹೋರಾಟಕ್ಕೆ ಬೆಂಬಲ ಘೋಷಿಸಿದ್ದರು. ಇದೇ ವೇಳೆ ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶೀಯರು ಅಭಿಪ್ರಾಯ ವ್ಯಕ್ತಪಡಿಸಬೇಕಾಗಿಲ್ಲ ಎಂದು ಕೇಂದ್ರ ಸಚಿವರು, ಬಾಲಿವುಡ್ ನಟನಟಿಯರು ಟ್ವೀಟ್ ಮಾಡಿದ್ದರು.












