ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ರೈತ ಹೋರಾಟವನ್ನು ಬೆಂಬಲಿಸಿ ಪಾಪ್ ಗಾಯಕಿ ರಿಹಾನ್ನ ಟ್ವೀಟ್ ಮಾಡಿದ ಬೆನ್ನಿಗೆ ಕೇಂದ್ರ ಸರಕಾರ ಆರಂಭಿಸಿದ ಇಂಡಿಯ ಎಗೈನೆಸ್ಟ್ ಪ್ರೊಪಗಂಡ ಅಭಿಯಾನಕ್ಕೆ ಸೇರಿದ ಕ್ರಿಕೆಟ್ ತಾರೆ ತೆಂಡುಲ್ಕರ್ ಕಟು ಟೀಕೆಗೊಳಗಾಗಿದ್ದರು. ಈಗ ಸ್ವಜನಪಕ್ಷಪಾತ ಆರೋಪ ಅವರ ಮೇಲರಗಿದೆ. ಈ ತಿಂಗಳು 18ಕ್ಕೆ ನಡೆಯುವ ಐಪಿಎಲ್ ಏಲಂನಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ರನ್ನು ಮುಂಬೈ ಇಂಡಿಯನ್ಸ್ ಖರೀದಿಸಲಿದೆ ಎಂದು ಸುದ್ದಿಯಾದ ಬೆನ್ನಿಗೆ ಚರ್ಚೆಗಳು ಆರಂಭವಾಗಿದೆ.
ಎರಡು ಟ್ವೆಂಟಿ 20 ಸ್ಪರ್ಧೆಗಳ ಅನುಭವ ಇರುವ ಅರ್ಜುನ್ ಮೂಲ ಬೆಲೆ 20 ಲಕ್ಷ ರೂಪಾಯಿ ಲೀಸ್ಟ್ ಮಾಡಲಾಗಿದೆ. ಇತ್ತೀಚೆಗೆ ನಡೆದಿದ್ದ ಮುಶ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈಗಾಗಿ ಆಡಿದ ಅರ್ಜುನ್ ಗಮನ ಸೆಳೆಯುವ ಪ್ರದರ್ಶನ ನೀಡಿಲ್ಲ.
ಎರಡು ಪಂದ್ಯದಲ್ಲಿ ಆಡಿದ ಅರ್ಜುನ್ ಎರಡು ವಿಕೆಟ್ ಗಳಿಸಿದರು. ಬ್ಯಾಟಿಂಗ್ನಲ್ಲಿ ಮೂರು ರನ್ ಗಳಿಸಿದರು. ಹರಿಯಾಣದ ವಿರುದ್ಧ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು. ಮೂರು ಓವರ್ ದಾಳಿಯಲ್ಲಿ 34 ರನ್ ಬಿಟ್ಟು ಕೊಟ್ಟಿದ್ದರು. ಪುದುಚೇರಿ ವಿರುದ್ಧ ಎರಡನೆ ಪಂದ್ಯದಲ್ಲಿ ಮೂರು ರನ್ ಹೊಡೆದರು. 33 ರನ್ ಕೊಟ್ಟು ಒಂದು ವಿಕೆಟ್ ಗಳಿಸಿದ್ದರು. ಎರಡು ಪಂದ್ಯಗಳಲ್ಲಿಯೂ ಮುಂಬೈ ಸೋಲುಂಡಿತ್ತು. ಆದ್ದರಿಂದ ಅರ್ಜುನ್ನ ಐಪಿಎಲ್ ಪ್ರವೇಶವನ್ನು ಅಭಿಮಾನಿಗಳು ಪ್ರಶ್ನಿಸಿ ರಂಗಪ್ರವೇಶಿಸಿದ್ದಾರೆ.
75 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಎಸ್.ಶ್ರೀಶಾಂತ್ ಕೂಡ ಏಲಂನಲ್ಲಿದ್ದಾರೆ. ರೈತರ ಹೋರಾಟದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಯ ವಿರುದ್ಧ ಕಣ್ಣು ಮುಚ್ಚಿ ಕೇಂದ್ರ ಸರಕಾರದ ಅಜೆಂಡಾದಂತೆ ನಿಲುವು ತೆಗೆದುಕೊಂಡ ಸಚಿನ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲದೇ ಬಹಿರಂಗ ಪ್ರತಿಭಟನೆ ವ್ಯಾಪಕವಾಗಿದೆ. ಕಳೆದ ದಿವಸ ಕೇರಳದಲ್ಲಿ ಸಚಿನ್ ಕಟೌಟ್ಗೆ ಕಪ್ಪು ಮಸಿ ಬಳಿಯಲಾಗಿತ್ತು












