ದ್ವಿತೀಯ ಪಿಯುಸಿ ಫಲಿತಾಂಶ: ಮೆಲ್ಕಾರ್ ಮಹಿಳಾ ಪಿಯು ಕಾಲೇಜಿಗೆ 95% ಫಲಿತಾಂಶ

0
509

ಸನ್ಮಾರ್ಗ ವಾರ್ತೆ

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪಿಯು ಕಾಲೇಜು 95% ಫಲಿತಾಂಶ ಪಡೆದು ಸಾಧನೆಗೈದಿದೆ. ಒಟ್ಟು 122 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 115 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಅಸ್ಬಹುನ್ನಿಶಾ 575(95.83%), ಕಲಾ ವಿಭಾಗದಲ್ಲಿ ನಿಶಾತ್ ಫಾತಿಮಾ 566(94.33%) ಹಾಗೂ ವಿಜ್ಞಾನ ವಿಭಾಗದಲ್ಲಿ ನಫೀಸಾ ಶಹಾಬ 558 (93%) ವಿಶಿಷ್ಟ‌ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.