ಎಡವಣ್ಣ, ಜು. 27: ಮುಸ್ಲಿಂ ಲೀಗ್ ರಾಜ್ಯ ಉಪಾಧ್ಯಕ್ಷ ಮತ್ತು ಚಂದ್ರಿಕಾ ಪತ್ರಿಕೆಯ ಸಂಪಾದಕ ಎಂ.ಐ ತಂಙಳ್ (65) ನಿಧನರಾದರು. ಅಸ್ತಮಾ ರೋಗಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.ಶನಿವಾರ ಬೆಳಗ್ಗೆ ಕಲ್ಲಿಕೋಟೆಯ ಮೈತ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. 9: 30ಕ್ಕೆ ಅವರು ಕೊನೆಯುಸಿರೆಳೆದರು.
ಪತ್ರಕರ್ತ, ಬರಹಗಾರ, ಗ್ರಂಥಕರ್ತ, ಭಾಷಣಕಾರ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮುಂತಾದ ಹಲವು ಕ್ಷೇತ್ರದಲ್ಲಿ ಅವರು ಸಕ್ರಿಯರಾಗಿದ್ದರು. ಅವರು ಇಂಗ್ಲಿಷ್, ಉರ್ದು ,ಹಿಂದಿ ಮಲೆಯಾಳಂ ಭಾಷೆಯಲ್ಲಿ ಪ್ರಾವೀಣ್ಯ ಪಡೆದವರು. ಭಾರತದಾದ್ಯಂತ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಪರ್ಯಟನೆ ನಡೆಸಿದ್ದರು. ಕ್ರಾಂತಿಕಾರಿ ಪ್ರವಾದಿ(ಸ), ಕರ್ಮಶಾಸ್ತ್ರದ ಪರಿಣಾಮ, ಪವಿತ್ರ ಕುರ್ ಆನಿನ ಪ್ರಕೃತಿ ರಹಸ್ಯಗಳು, ನಮ್ಮ ಅರ್ಥಶಾಸ್ತ್ರ ಅವರ ಗಮನಸೆಳೆದ ಅನುವಾದಿತ ಕೃತಿಯಾಗಿದೆ. ಎ ವಿ ಅಬ್ದುರ್ರಹ್ಮಾನ್ ಹಾಜಿ ಪೌಂಡೆಶನ್ ಪ್ರಶಸ್ತಿ, ದುಬೈ ಕೆಎಂಸಿಸಿ ಪ್ರಶಸ್ತಿ, ಮಲಪ್ಪುರಂ ಜಿಲ್ಲಾ ಮಾಧ್ಯಮ ಪ್ರಶಸ್ತಿ, ಅಲ್ಕೋಬರ್ ಕೆಎಂಸಿಸಿ ರಜತ ಜ್ಯೂಬಿಲಿ ಪ್ರಶಸ್ತಿ ಅವರಿಗೆ ಲಭಿಸಿದೆ. ಪುತ್ರಿ ಪುತ್ರರನ್ನು, ಬಂಧು ಮಿತ್ರಾದಿಗಳು ಹಾಗೂ ಅಪಾರ ಅಭಿಮಾನಿ ವೃಂದವನ್ನು ಅವರು ಬಿಟ್ಟು ಅಗಲಿದ್ದಾರೆ.












