ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 24: ವಿವಾದಿತ ಹೇಳಿಕೆ ನೀಡಿದ ದಿಲ್ಲಿ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರ ವಿರುದ್ಧ ಚುನಾವಣಾ ಆಯೋಗ ನೋಟಿಸು ಕಳುಹಿಸಿದೆ. ದಿಲ್ಲಿಯಲ್ಲಿ ಮಿನಿ ಪಾಕಿಸ್ತಾನ ಇದೆ ಎಂದು ಕಪಿಲ ಮಿಶ್ರಾ ಹೇಳಿದ್ದರು. ಚುನಾವಣಾ ಅಧಿಕಾರಿಯವರು ಅವರಿಗೆ ನೋಟಿಸು ಜಾರಿ ಮಾಡಿದ್ದು ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಇದರ ಕುರಿತು ಅಧಿಕಾರಿ ವಿವರಣೆ ಕೇಳಿದ್ದಾರೆ. ಕೋಮು ದ್ವೇಷ ಸೃಷ್ಟಿಸುವ ರೀತಿಯ ಹೇಳಿಕೆಗಾಗಿ ಈಗ ಅವರು ಚುನಾವಣಾ ಆಯೋಗಕ್ಕೆ ಉತ್ತರಿಸಬೇಕಾಗಿದೆ.
ಪೌರತ್ವ ತಿದ್ದು ಪಡಿ ಕಾನೂನು ವಿರುದ್ಧ ಶಾಹಿನ್ ಬಾಗ್ನಲ್ಲಿ ನಡೆಯುವ ಹೋರಾಟವನ್ನು ಪಾಕಿಸ್ತಾನಕ್ಕೆ ಜೋಡಿಸಿ ಅವರು ಪರೋಕ್ಷ ಹೇಳಿಕೆ ನೀಡಿದ್ದರು. ದಿಲ್ಲಿಯನ್ನು ಒಂದು ಮಿನಿ ಪಾಕಿಸ್ತಾನ ಮಾಡಲಾಗುತ್ತಿದೆ ಎಂದು ಕಪಿಲ್ ಮಿಶ್ರ ಟ್ವೀಟ್ ಮಾಡಿ ಟೀಕಿಸಿದ್ದರು.
ಪಾಕಿಸ್ತಾನ ಶಾಹೀನ್ ಬಾಗ್ಗೆ ಬಂದಿದೆ. ದಿಲ್ಲಿಯಲ್ಲಿ ಮಿನಿ ಪಾಕಿಸ್ತಾನಗಳು ಇದ್ದವು. ಶಾಹಿನ್ ಬಗ್, ಚಂದ್ ಬಾಗ್, ಇಂದರ್ ಲೋಕ್ ಏರಿಯದಲ್ಲಿ ಭಾರತದ ಕಾನೂನು ಇಲ್ಲ. ಪಾಕಿಸ್ತಾನದ ಗೂಂಡಾಗಲು ದಿಲ್ಲಿಯ ಬೀದಿಗಳನ್ನು ಹಿಡಿದು ಇಟ್ಟುಕೊಂಡಿದ್ದಾರೆ ಎಂದು ಕಪೀಲ್ ಮಿಶ್ರಾ ಟ್ವೀಟ್ ಮಾಡಿದ್ದರು. ಫೆಬ್ರುವರಿ ಎಂಟಕ್ಕೆ ದಿಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದು ಭಾರತ ಮತ್ತು ಪಾಕಿಸ್ತಾನ ಸ್ಪರ್ಧೆಯಂತೆ ಇದೆ ಎಂದು ಮಿಶ್ರಾ ಟ್ವೀಟ್ ಮಾಡಿದ್ದೂ ವಿವಾದವಾಗಿತ್ತು. ಕಾಂಗ್ರೆಸ್, ಎಎಪಿಗಳು ಶಾಹಿನ್ ಬಾಗ್ನಂತಹ ಹಲವು ಮಿನಿ ಪಾಕಿಸ್ತಾನಗಳನ್ನು ಹುಟ್ಟುಹಾಕಿದ್ದು ಫೆಬ್ರುವರಿ ಎಂಟಕ್ಕೆ ಜನರು ಇದಕ್ಕೆ ಉತ್ತ ರ ನೀಡಬೇಕೆಂದು ಮಿಶ್ರ ಹೇಳಿದ್ದರು.












