ಎಂಎಲ್‌ಎಸ್ ವತಿಯಿಂದ ವಿಪಕ್ಷ ಉಪನಾಯಕ ಯು.ಟಿ ಖಾದರ್‌‌ರಿಗೆ ಸನ್ಮಾನ

0
160

ಸನ್ಮಾರ್ಗ ವಾರ್ತೆ

ಮಂಗಳೂರು: ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ನೇಮಕವಾಗಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯುಟಿ ಖಾದರ್ ಅವರನ್ನು ಅವರ ನಿವಾಸದಲ್ಲಿ ಇಂದು ರಾಜ್ಯ ಮುಸ್ಲಿಂ ಲೇಖಕರ ಸಂಘದ(ಎಂಎಲ್‌ಎಸ್) ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಅವರು ಸಚಿವರಾಗಿ ಮತ್ತು ಶಾಸಕರಾಗಿ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.

ಜನಪ್ರತಿನಿಧಿ ಎಂಬ ಪರಿಕಲ್ಪನೆಗೆ ಅತ್ಯಂತ ಸಮರ್ಪಕ ನ್ಯಾಯ ಒದಗಿಸಿ ರುವ ಅಪರೂಪದ ರಾಜಕಾರಣಿಗಳಲ್ಲಿ ಯು.ಟಿ ಖಾದರ್ ಒಬ್ಬರು. ಇಂದಿನ ರಾಜಕೀಯವು ಜಾತಿ, ಧರ್ಮದ ಆಧಾರದಲ್ಲಿ ಒಡೆದಿರುವಾಗ ಯು.ಟಿ ಖಾದರ್ ಅವರು ಇವುಗಳಿಂದ ಅಂತರ ಕಾಯ್ದುಕೊಂಡು ಹಿಂದೂ-ಮುಸ್ಲಿಂ ಸಹಿತ ಎಲ್ಲರ ಜನಪ್ರತಿನಿಧಿಯಾಗಿ ಗುರುತಿಸಿಕೊಂಡಿರುವುದು ಮತ್ತು ಎಲ್ಲರಿಂದ ಸಮಾನ ಗೌರವ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಒಂದು ಸೂಟ್‌ಕೇಸು ಶಾಸಕರ ಪಕ್ಷವನ್ನೇ ಬದಲಿಸಿ ಬಿಡುವ ಇಂದಿನ ಕಾಲದಲ್ಲಿ ಅತ್ಯಂತ ಪ್ರಾಮಾಣಿಕ, ಸಿದ್ಧಾಂತ ಬದ್ಧ ಮತ್ತು ಭ್ರಷ್ಟಾಚಾರರಹಿತ ವ್ಯಕ್ತಿಯಾಗಿ ಯು ಟಿ ಖಾದರ್ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಜನಸಾಮಾನ್ಯರ ಪಾಲಿಗೆ ಸದಾ ಕೈಗೆಟುಕುವ ಅವರು ಜನರ ಶಾಸಕರಾಗಿಯೂ ಪರಿಚಿತರಾಗಿದ್ದಾರೆ. ಈ ಮೂಲಕ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯನ್ನೂ ತಂದಿದ್ದಾರೆ. ಅವರು ವಿಪಕ್ಷ ಉಪನಾಯಕರಾಗಿ ನೇಮಕವಾಗಿರುವುದು ಅವರ ಈ ಪ್ರಾಮಾಣಿಕತೆ, ಬದ್ಧತೆ ಮತ್ತು ಜನಾನುರಾಗಕ್ಕೆ ಸಂದ ಗೌರವ ಎಂದು ಈ ಸಂದರ್ಭದಲ್ಲಿ ಸ್ಮರಿಸಿ ಅಭಿನಂದಿಸಲಾಯಿತು.

ಮುಸ್ಲಿಂ ಲೇಖಕರ ಸಂಘದ ಉಪಾಧ್ಯಕ್ಷ ಆಲಿ ಕುಂಞಿ ಪಾರೆ ಶಾಸಕರಿಗೆ ಶಾಲು ಹೊದಿಸಿದರು. ಕೋಶಾಧಿಕಾರಿ ಮುಹಮ್ಮದ್ ಮುಹ್ಸಿನ್ ಹೂಗುಚ್ಚ ನೀಡಿದರು. ಕಾರ್ಯದರ್ಶಿ ಏ.ಕೆ ಕುಕ್ಕಿಲ ಅಭಿನಂದನೆಯ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಕಮ್ಮರಡಿ ಪ್ರಾಸ್ತಾವಿಕ ಮಾತನ್ನಾಡಿದರು. ಸಂಘದ ಸದಸ್ಯರಾದ ಶೌಕತ್ ಅಲಿ, ಹುಸೈನ್ ಕಾಟಿಪಳ್ಳ, ಸಲೀಮ್ ಬೋಳಂಗಡಿ ಮತ್ತು ಸಂಘದ ಹಿತೈಷಿ ಮುನ್ನ ಕಮ್ಮರಡಿ ಉಪಸ್ಥಿತರಿದ್ದರು.