‘ಮೀಡಿಯಾ ಒನ್’ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

0
31

ಸನ್ಮಾರ್ಗ ವಾರ್ತೆ

ನವದೆಹಲಿ: ಪ್ರಸಾರ ನಿಷೇಧವನ್ನು ಪ್ರಶ್ನಿಸಿ ಮೀಡಿಯಾ ಒನ್ ಚಾನೆಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಮುಂದಿನ ವಾರ ಈ ಕುರಿತಂತೆ ವಾದವನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟು ಹೇಳಿದೆ.

ಮೀಡಿಯಾ ಒನ್ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಖ್ಯಾತ ವಕೀಲ ದುಷ್ಯಂತ್ ದವೆ ಕೋರ್ಟ್ ಕಲಾಪ ಆರಂಭವಾದ ತಕ್ಷಣ ವಿನಂತಿಸಿದರು.  ಈ ವೇಳೆ, ಮುಂದಿನ ವಾರ ಪ್ರಕರಣವನ್ನು ಪರಿಗಣಿಸುವುದಾಗಿ ಕೋರ್ಟು ಹೇಳಿದೆ.

ಜಸ್ಟಿಸ್ ಡಿ.ವೈ ಚಂದ್ರಚೂಡ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕೇಂದ್ರ ಸರಕಾರ ವಿಧಿಸಿದ ಪ್ರಸಾರ ನಿಷೇಧವನ್ನು ಪ್ರಶ್ನಿಸಿ ಮೀಡಿಯಾ ಒನ್ ಚಾನೆಲ್ ಸಲ್ಲಿಸಿದ್ದ ಅರ್ಜಿಯ ಅಂತಿಮ ವಿಚಾರಣೆಯು ಆಗಸ್ಟ್ 10ರಂದು ನಡೆಯಬೇಕಿತ್ತು.

ಈ ಮೊದಲು ಪ್ರಕರಣವನ್ನು ಪರಿಶೀಲಿಸಿದ್ದ ಸುಪ್ರೀಂ ಕೋರ್ಟ್, ನಿಷೇಧಕ್ಕೆ ತಾತ್ಕಾಲಿಕ ತಡೆ ನೀಡಿ ಚಾನೆಲ್ ಪ್ರಸಾರಕ್ಕೆ ಅನುಮತಿ ನೀಡಿದ್ದು, ಅದು ಈಗಲೂ ಮುಂದುವರೆದಿದೆ.