ಕಸದ ಗಾಡಿಯಲ್ಲಿ ಮೋದಿ, ಯೋಗಿ ಫೋಟೋ ಪ್ರಕರಣ: ವಜಾಗೊಂಡಿದ್ದ ಪೌರಕಾರ್ಮಿಕ ಮರು ನೇಮಕ

0
471

ಸನ್ಮಾರ್ಗ ವಾರ್ತೆ

ಮಥುರಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ಫೋಟೋಗಳನ್ನು ಕಸದ ಗಾಡಿಯಲ್ಲಿ ಸಾಗಿಸಿದ ವೀಡಿಯೊ ವೈರಲ್ ಆದ ನಂತರ ಕೆಲಸದಿಂದ ತೆಗೆದು ಹಾಕಲಾದ ಪೌರ ಕಾರ್ಮಿಕನನ್ನು ಪುನಃ ಮರು ನೇಮಕ ಮಾಡಲಾಗಿದೆ.

ಉತ್ತರ ಪ್ರದೇಶದ ಮಥುರಾ ನಿಗಮ್ ಮುನ್ಸಿಪಲ್ ಕಾರ್ಪೊರೇಷನ್ ಶುಚೀಕರಣ ಕಾರ್ಮಿಕ ಬೋಬಿ ಖೋರೆಯವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಂಡಿದೆ. ಕೆಲಸದಿಂದ ವಜಾಗೊಳಿಸಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ, ವಿರೋಧ ಕೇಳಿ ಬಂದ ಬೆನ್ನಲ್ಲೇ ಮುನ್ಸಿಪಲ್ ಈ ಕ್ರಮಕ್ಕೆ ಮುಂದಾಗಿದೆ.

ಕಾರ್ಮಿಕ ಮತ್ತು ಅವರ ಕುಟುಂಬ ಮುಂದಿಟ್ಟ ಬೇಡಿಕೆಯನ್ನು ಗಮನಿಸಿ ಮುನ್ನೆಚ್ಚರಿಕೆ ನೀಡಿ ಕೆಲಸಕ್ಕೆ ಮರು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಮಥುರಾ-ವೃಂದಾವನ ನಗರ ನಿಗಮ್ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಅನುನಯ ಝಾ ತಿಳಿಸಿದರು.

ಶನಿವಾರ ಗುತ್ತಿಗೆಯಾಧಾರಿತ ಕೆಲಸ ಮಾಡುತ್ತಿರುವ ಬೋಬಿ ಕಸದ ರಾಶಿಯಲ್ಲಿ ಹಾಕಿ ಯೋಗಿ ಮೋದಿಯ ಫೋಟೊ ಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರವಾಗಿತ್ತು. ನಂತರ ಅವರನ್ನು ಮುನ್ಸಿಪಲ್ ಕಾರ್ಪೊರೇಷನ್ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಅಡಿಶನಲ್ ಕಮಿಷನರ್ ಸತ್ಯೇಂದ್ರ ತಿವಾರಿ ತಿಳಿಸಿದ್ದರು. ಆದರೆ ಬೀದಿಯಲ್ಲಿ ಬಿದ್ದು ಸಿಕ್ಕಿದ್ದ ಫೋಟೊ, ಅದನ್ನು ವಿಲೇವಾರಿ ಮಾಡುವ ಕೆಲಸವನ್ನು ಮಾತ್ರ ಮಾಡಿದ್ದೆ ಎಂದು ಬೋಬಿ ಹೇಳಿದ್ದಾರೆ. ನಂತರ ಒಂದಿಬ್ಬರು ಕಸದ ರಾಶಿಯಿಂದ ಮೋದಿ ಯೋಗಿಯ ಫೋಟೋವನ್ನು ಹೊರ ತೆಗೆದು ವೀಡಿಯೊ ಮಾಡಿದ್ದರು.

“ನಾನು ಮತ್ತೆ ಈ ತಪ್ಪು ಕೆಲಸ ಮಾಡುವುದಿಲ್ಲ ಎಂದು ಬೋಬಿ‌ ಖಾರೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.