ಸನ್ಮಾರ್ಗ ವಾರ್ತೆ
ಟೆಹ್ರಾನ್,ಸೆ.8: ಅಮೆರಿಕದ ದಿಗ್ಬಂಧನದಿಂದ ಆರ್ಥಿಕ ಪರಿಸ್ಥಿತಿ ತೀರ ಕುಗ್ಗಿ ಹೋಗಿರುವ ಇರಾನ್ ತಾನಿನ್ನೂ ಧೃತಿಗೆಟ್ಟಿಲ್ಲ ಎಂದು ಬಿಂಬಿಸುತ್ತಿದೆ. ಇರಾನ್ ಅಧಿಕೃತವಾಗಿ ಇತಿಮಿತಿಯಿಲ್ಲದೆ ಯುರೇನಿಯಂ ಸಂಸ್ಕರಿಸುವುದಾಗಿ ಯುರೋಪಿಯನ್ ಯೂನಿಯನ್ಗೆ ತಿಳಿಸಿದೆ.
ಅಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ಬಳಿಕವೂ ಯುರೋಪಿಯನ್ ಯೂನಿಯನ್ 2015ರ ಅಣು ಒಪ್ಪಂದವನ್ನು ಸಂರಕ್ಷಿಸಲು ಕ್ರಮಕೈಗೊಡಿಲ್ಲ ಎಂದು ಇರಾನ್ ಆರೋಪಿಸಿದ್ದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವಿದ್ ಸಾರಿಫ್ ಯುರೋಪಿಯನ್ ಯೂನಿಯನ್ ವಿದೇಶ ವಿಷಯಗಳ ಮುಖ್ಯಸ್ಥ ಫೆಡ್ರಿಕ್ ಮೊಖೆರ್ಗೆ ತನ್ನ ದೇಶದ ನಿರ್ಧಾರವನ್ನು ತಿಳಿಸಿದ್ದಾರೆ.












