ಮೋದಿಯವರ ಪ್ರೀತಿಯ ಏಜೆನ್ಸಿಯಿಂದ ಒಂದು ಪ್ರೇಮ ಪತ್ರ ಸಿಕ್ಕಿದೆ- ಇಡಿ ನೋಟಿಸಿಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಾರ್ಟಿ

0
698

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಆಮ್ ಆದ್ಮಿ ಪಾರ್ಟಿಗೆ ಎನ್‍ಫೋರ್ಸ್‍ಮೆಂಟ್ ಡೈರಕ್ಟರೇಟ್ ನೋಟಿಸು ಕಳುಹಿಸಿದ್ದನ್ನು ಆಮ್ ಆದ್ಮಿಪಾರ್ಟಿ ಗೇಲಿ ಮಾಡಿದೆ. ಮೋದಿಯ ಪ್ರೀತಿಯ ಏಜೆನ್ಸಿಯಿಂದ ಪ್ರೇಮ ಪತ್ರ ಸಿಕ್ಕಿದೆ ಎಂದು ಆಮ್ ಆದ್ಮಿಪಾರ್ಟಿ ವಕ್ತಾರ ರಾಘವ ಚಡ್ಡ ಹೇಳಿದರು.

ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾರಿಗೆ ಇಡಿ ನೋಡಿಸು ನೀಡಿದೆ. ಆಮ್ ಆದ್ಮಿಪಾರ್ಟಿ ಕಳೆದ ಚುನಾವಣೆಯಲ್ಲಿ ಕಪ್ಪು ಹಣವನ್ನು ಬಿಳಿ ಮಾಡಲು ಯತ್ನಿಸಿದೆ ಎಂದು ಇಡಿ ಆರೋಪಿಸಿದೆ.

ನೋಟಿಸಿಗೆ ಪ್ರತಿಕ್ರಿಯಿಸಿದ ದಿಲ್ಲಿ ಮುಖ್ಯಮಂತ್ರಿ ಕೆಜ್ರಿವಾಲ್ ದಿಲ್ಲಿಯಲ್ಲಿ ಅವರು ಐಟಿ, ಸಿಬಿಐ, ಪೊಲೀಸ್ ಉಪಯೋಗಿಸಿ ಸೋಲಿಸಲು ಯತ್ನಿಸಿದರು. ಆದರೆ ನಾವು 62 ಸೀಟುಗಳನ್ನು ಗೆದ್ದುಕೊಂಡೆವು. ಪಂಜಾಬ್, ಗೋವಾ ,ಉತ್ತರಾಖಂಡ, ಗುಜರಾತ್‍ಗಳಲ್ಲಿ ನಾವು ಬೆಳೆಯುತ್ತಿದ್ದೇವೆ. ಹೀಗಿರುವಾಗ ನಮಗೆ ಒಂದು ಇಡಿ ನೋಟಿಸು ಸಿಗುತ್ತದೆ. ಭಾರತದಲ್ಲಿ ಜನರಿಗೆ ಸತ್ಯಸಂಧವಾದ ರಾಜಕೀಯ ಬೇಕಾಗಿದೆ. ಈ ತಂತ್ರಗಳಿಂದ ಬಿಜೆಪಿ ಎಂದೂ ಯಶಸ್ವಿಯಾಗುವುದಿಲ್ಲ. ಅವರು ನಮ್ಮನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.

ಮಾಜಿ ಎಎಪಿ ನಾಯಕ ಈಗ ಕಾಂಗ್ರೆಸ್ಸಿನಲ್ಲಿರುವ ಸುಖ್‍ಪಾಲ್ ಸಿಂಗ್ ಖೈರ ಸಹಿತ ಜನರನ್ನು ಕಪ್ಪು ಹಣ ಬಿಳಿ ಮಾಡಿದ ಪ್ರಕರಣದಲ್ಲಿ ವಿಚಾರಣೆಗೆ ಇಡಿ ಕರೆದಿದೆ.

ಮಾದಕವಸ್ತು ಸಾಗಾಟ, ನಕಲಿ ಪಾಸ್‍ಪೋರ್ಟುಗಳಿಗೆ ಸಂಬಂಧಿಸಿದ ಎರಡು ಎಫ್‍ಐಆರ್‌ಗಳನ್ನು ಖೈರಾ ವಿರುದ್ಧ ದಾಖಲಿಸಿಕೊಳ್ಳಲಾಗಿದೆ ಎಂದು ಸೂಚನೆ ಸಿಕ್ಕಿದ್ದು 2019ರಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಅವರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಎಎಪಿಗಾಗಿ ಅಮರಿಕದಿಂದ ಸುಮಾರು 1,00,000 ಅಮೆರಿಕನ್ ಡಾಲರ್ ದೇಣಿಗೆ ಇವರು ಸಂಗ್ರಹಿಸಿದ್ದರೆಂದು ಇಡಿ ಮೂಲಗಳು ಹೇಳುತ್ತಿವೆ.

ಸರಕಾರದ ಕೃಷಿ ಕಾನೂನಿನ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ತನ್ನನ್ನು ಕೇಂದ್ರ ಏಜೆನ್ಸಿಗಳು ಗುರಿಯಾಗಿಸುತ್ತಿವೆ ಎಂದು ಸುಖ್‍ಪಾಲ್ ಸಿಂಗ್ ಖೈರಾ ಹೇಳುತ್ತಿದ್ದಾರೆ.