ಸಂಸ್ಕೃತ ಮಾತ್ರವಲ್ಲ ತಮಿಳು ಕೂಡ ದೇವ ಭಾಷೆ- ಮದ್ರಾಸ್ ಹೈಕೋರ್ಟು

0
187

ಸನ್ಮಾರ್ಗ ವಾರ್ತೆ

ಚೆನ್ನೈ: ಸಂಸ್ಕೃತವೊಂದೇ ಅಲ್ಲ ತಮಿಳು ಕೂಡಾ ದೇವ ಭಾಷೆಯಾಗಿದೆ ಎಂದು ಮದ್ರಾಸ್ ಹೈಕೋಟು ಹೇಳಿದೆ. ಜಸ್ಟಿಸ್ ಎನ್ ಕಿರುಬಕರನ್, ಬಿ. ಪುಕಯೇಂದಿಯವರನ್ನೊಳಗೊಂಡ ಪೀಠ ಹೀಗೆಂದಿದ್ದು. ಮಂದಿರ ಪ್ರತಿಷ್ಠಾಪನೆಯಲ್ಲಿ ಸಂಸ್ಕೃತದಲ್ಲಿರುವ ಮಂತ್ರಗಳು ಮಾತ್ರವಲ್ಲ ತಮಿಳು ಮಂತ್ರಗಳನ್ನು ಕೂಡ ಉಚ್ಚರಿಸಬೇಕೆಂದು ಕೋರ್ಟು ತೀರ್ಪಿತ್ತಿತು. ಕರೂ ಜಿಲ್ಲೆಯ ದೇವಸ್ಥಾನದಲ್ಲಿ ತಮಿಳು ಮಂತ್ರ ಹೇಳಲು ಅಧಿಕೃತರಿಗೆ ಸೂಚಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಕೋರ್ಟು ಹೀಗೆಂದಿದೆ.

ದೇವರೊಂದಿಗೆ ಸಂಬಂಧ ಇರುವ ಭಾಷೆ ದೇವ ಭಾಷೆಯಾಗಿದೆ. ಮನುಷ್ಯರು ಮಾತಾಡುವ ಯಾವ ಭಾಷೆಯೂ ದೇವಭಾಷೆಯಾಗಿದೆ ಎಂದು ಕೋರ್ಟು ಅಂದಿತು. ಮನುಷ್ಯರಿಗೆ ಭಾಷೆ ಸೃಷ್ಟಿಸಲು ಆಗದು. ಶತಮಾನಗಳ ಮುಂಚೆ ಸೃಷ್ಟಿಸಲಾದ ಭಾಷೆ ತಲೆಮಾರುಗಳಿಂದ ಬಂದಿದೆ ಇಂದಿನ ರೂಪಕ್ಕೆ ಆಗಿದೆ. ತಮಿಳುನಾಡಿನ ಮಂದಿರದಲ್ಲಿ ತಮಿಳು ಉಪಯೋಗಸದಿದ್ದರೆ ಮತ್ತೆ ಯಾವ ದೇವಸ್ಥಾನಗಳಲ್ಲಿ ಅದನ್ನು ಉಪಯೋಗಿಸಲಾದೀತೆಂದು ಕೋರ್ಟು ಪ್ರಶ್ನಿಸಿತು.

ಸಂಸ್ಕೃತ ಮಾತ್ರ ದೇವ ಭಾಷೆಯಲ್ಲ ಎಂದು ನಮ್ಮ ನಾಡಿನ ಅಭಿಪ್ರಾಯವಾಗಿದೆ. ಖಂಡಿತ ಸಂಸ್ಕೃತದಲ್ಲಿ ಉತ್ತಮ ಸಾಹಿತ್ಯಗಳಿವೆ. ನಂಬಿಕೆಗೆ ತಕ್ಕಂತೆ ಹಲವು ಸ್ಥಳಗಳಲ್ಲಿ ಆರಾಧನಾ ಕ್ರಮಗಳಲ್ಲಿ ಬದಲಾವಣೆ ಬರಬಹುದೋ ಅಲ್ಲೆಲ್ಲ ಪ್ರಾದೇಶಿಕ ಭಾಷೆಯನ್ನು ಆರಾಧನೆಗೆ ಉಪಯೋಗಿಸಬೇಕೆಂದು ಕೋರ್ಟು ಅಭಿಪ್ರಾಯಿಸಿತು.

LEAVE A REPLY

Please enter your comment!
Please enter your name here