ಮಧ್ಯಪ್ರದೇಶ: ಮುಖ್ಯಮಂತ್ರಿಗೆ ಸೊಳ್ಳೆ ಕಚ್ಚಿದ್ದಕ್ಕೆ ಇಂಜಿನಿಯರ್ ಗೆ ನೋಟಿಸ್…!

0
535

ಸನ್ಮಾರ್ಗ ವಾರ್ತೆ

ಮದ್ಯಪ್ರದೇಶ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‍ರವರು ಗೆಸ್ಟ್ ಹೌಸಿನಲ್ಲಿ ತಂಗಿದ್ದ ವೇಳೆ ಸೊಳ್ಳೆ ಕಚ್ಚಿದ್ದರಿಂದ ಕಾರಣ ಕೇಳಿ ರಿವ ಕಮಿಶನರ್ ರಾಜೇಶ್ ಕುಮಾರ್ ಜೈನ್‍ಗೆ ಕೇಳಿ ನೋಟಿಸು ಕಳುಹಿಸಿರುವ ವಿಚಿತ್ರ ಸಂಗತಿ ವರದಿಯಾಗಿದೆ.
ಇದೇ ಕಾರಣವಾಗಿ ಇಂಜಿನಿಯರ್ ರವರನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ವರದಿಯಾಗಿದ್ದರೂ ಡಿವಿಷನಲ್ ಕಮಿಶನರ್ ಸುದ್ದಿಯನ್ನು ನಿರಾಕರಿಸಿದಾರೆ.

ಜೈನ್ ವಿರುದ್ಧ ಜಾರಿ ಮಾಡಿದ ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಬಂಗಾಂಗ ಕಾಲುವೆಗೆ ಬಸ್ ಪಲ್ಟಿಯಾಗಿ ಹಲವು ಮಂದಿ ಮೃತಪಟ್ಟ ಘಟನೆಯಲ್ಲಿ ಬುಧವಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾನ್ ಸಂದರ್ಶಿಸಲು ಬಂದಿದ್ದರು. ಮೃತರ ಮನೆಗಳಿಗೆ ಭೇಟಿ ನೀಡಿದ ಬಳಿಕ ಗೆಸ್ಟ್ ಹೌಸ್‍ನ ಒಂದನೇ ನಂಬರಿನ ಕೊಠಡಿಯಲ್ಲಿ ಉಳಿದುಕೊಂಡಿದ್ದರು.

ಕೊಠಡಿಯಲ್ಲಿ ಸೊಳ್ಳೆಗಳ ಕಾಟಕ್ಕೆ ಮುಖ್ಯಮಂತ್ರಿಗಳಿಗೆ ತೊಂದರೆಯಾಗಿದ್ದ ಬಗ್ಗೆ ವಿಷಯ ಅರಿತ ಬಳಿಕ ಇಂಜಿನಿಯರ್ ರವರಿಗೆ ಕಾರಣ ಕೇಳಿ, ನೋಟಿಸ್ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ್ದರಿಂದ ಈ ಇಂತಹ ಯಾವುದೇ ನೋಟಿಸ್ ನೀಡಿಲ್ಲ ಎಂದು ಡಿವಿಷನಲ್ ಕಮಿಷನರ್ ಸಮಜಾಯಿಷಿ ನೀಡಿದ್ದಾರೆ.

ಗೆಸ್ಟ್ ಹೌಸ್‌ ನಲ್ಲಿ ಮಲಗಿದ್ದು ಮುಖ್ಯಮಂತ್ರಿಯೇ, ಇಂಜಿನಿಯರೇ, ಸಾಮಾನ್ಯ‌ನೇ ಎಂಬ ಅರಿವು ಸೊಳ್ಳೆಗೆ ಇದೆಯೇ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿ, ವ್ಯಂಗ್ಯವಾಡಿದ್ದಾರೆ‌.