ಬೆತ್ಲ್ ಹೇಮ್ ಚರ್ಚಿನಲ್ಲಿ ಶೋಕ ತಪ್ತ ಕ್ರಿಸ್ಮಸ್: ಗಾಜಾದ ಮಕ್ಕಳ ಪ್ರತಿ ಕೃತಿಯಾಗಿ ಕಂಡ ಬಾಲ ಯೇಸು

0
459

ಸನ್ಮಾರ್ಗ ವಾರ್ತೆ

ಬೆತ್ಲೆಹೇಮ್ ಚರ್ಚಿನಲ್ಲಿ ಕ್ರೈಸ್ತರು ಅತ್ಯಂತ ಶೋಕ ತಪ್ತ ಕ್ರಿಸ್ಮಸ್ ಆಚರಣೆಗೆ ಸಿದ್ದರಾಗಿದ್ದಾರೆ. ಇಸ್ರೇಲ್ ಬಾಂಬ್ ದಾಳಿಗೆ 6000 ಕ್ಕಿಂತಲೂ ಅಧಿಕ ಗಾಝಾದ ಮಕ್ಕಳು ಪ್ರಾಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಕ್ರಿಸ್ಮಸ್ ಪ್ರತಿ ಕೃತಿಯೇ ಬದಲಾಗಿದೆ.

ಲೈಟ್ ಗಳು, ನಕ್ಷತ್ರ ತೂಗುವ ಮರಗಳು, ಕೊಟ್ಟಿಗೆಯಂತಹ ನಿರ್ಮಿತಿಯ ಬದಲು ಉರುಳಿದ ಕಾಂಕ್ರೀಟ್ ಕಟ್ಟಡಗಳ ತುಂಡುಗಳು, ಕಾಂಕ್ರೀಟು ತುಂಡುಗಳ ತುದಿಯಲ್ಲಿ ಮಕ್ಕಳ ಪ್ರತಿ ಕೃತಿಗಳು, ಬಿಳಿ ವಸ್ತ್ರದ ಬದಲು ಫೆಲಸ್ತೀನಿಯರು ಪರಂಪರಾಗತವಾಗಿ ಧರಿಸುವ ಕಫೀಯ ಎಂಬ ಡ್ರೆಸ್, ಬೆಳಕು.. ಇವೆಲ್ಲಾ ಕ್ರಿಸ್ಮಸ್ ನ ಹಿನ್ನೆಲೆಯಲ್ಲಿ ಯೇಸುಕ್ರಿಸ್ತ ಜನಿಸಿದ್ದರೆಂದು ಹೇಳುವ ಬೆತ್ಲೆಹೇಮಿನ ಲೂತರನ್ ಚರ್ಚಿನಲ್ಲಿ ಕಂಡು ಬಂದ ದೃಶ್ಯ.

ಗಾಝಾದ ಮಕ್ಕಳನ್ನು ಇಸ್ರೇಲ್ ಬಾಂಬುಗಳು ಕೊಂದು ಹಾಕಿರುವ ಹಿನ್ನೆಲೆಯಲ್ಲಿ ಈ ಪ್ರಾತ್ಯಕ್ಷಿಕೆಯೊಂದಿಗೆ ಕ್ರಿಸ್ಮಸ್ ಆಚರಿಸುವುದಕ್ಕೆ ಬೆತ್ಲೆಹೇಮಿನ ಕ್ರೈಸ್ತರು ಸಜ್ಜಾಗಿದ್ದಾರೆ.

ಗಾಝಾದ ಫೆಲೆಸ್ತೀನಿಯರ ಪರ ತಮ್ಮ ನಿಲುವನ್ನು ಈ ಮೂಲಕ ಕ್ರೈಸ್ತರು ಸಾರಿದ್ದಾರೆ. ಆಕ್ರಮಿತ ಫೆಲಸ್ತೀನಿನ ಜೆರುಸಲೇಮಿನ ಬೆತ್ಲೆ ಹೇಮ್ ನಲ್ಲಿ ಈ ದೃಶ್ಯ ಕಂಡು ಬಂದಿದೆ.