ರಷ್ಯನ್ ಹಾಗೂ ಟರ್ಕಿಷ್ ಸೇನೆಗಳು ಲಿಬಿಯಾದಿಂದ ಹಿನ್ನಡೆಯಬೇಕು: ಅಮೆರಿಕ ಕರೆ

0
391

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಆಂತರಿಕ ಯುದ್ಧದಿಂದ ಬಳಲುತ್ತಿರುವ ಲಿಬಿಯದಲ್ಲಿ ಮುಂಚೂಣಿಯಲ್ಲಿರುವ ರಷ್ಯನ್, ಟರ್ಕಿಷ್ ಸೇನೆ ಹಿಂತೆರಳಬೇಕೆಂದು ಅಮೆರಿಕ ಹೇಳಿದೆ. ಕಳೆದ ವರ್ಷ ಅಕ್ಟೋಬರಿನಲ್ಲಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಲಿಬಿಯದಲ್ಲಿ ಕದನ ವಿರಾಮ ಒಪ್ಪಂದ ಅಸ್ತಿತ್ವಕ್ಕೆ ಬಂದಿತ್ತುಮ.

ಮುಂದಿನ ಮೂರು ತಿಂಗಳಲ್ಲಿ ಲಿಬಿಯದ ಯುದ್ಧ ರಂಗದಲ್ಲಿರುವ ಎಲ್ಲ ವಿದೇಶಿ ಪಡೆಗಳು ಅಲ್ಲಿಂದ ಹೊರಟಹೋಗಬೇಕೆಂದು ಒಪ್ಪಂದದಲ್ಲಿ ಆಗ್ರಹಿಸಲಾಗಿತ್ತು. ಆದರೆ ಸಂಪೂರ್ಣವಾಗಿ ಸೇನೆಗಳು ಇನ್ನೂ ಲಿಬಿಯಾವನ್ನು ತೊರೆದಿಲ್ಲ. ನಂತರ ಕೊನೆಯ ತಾರೀಕು ಮುಗಿದರೂ ಅಲ್ಲಿಯೇ ಉಳಿದವರು ಕೂಡಲೇ ಅಲ್ಲಿಂದ ಹೊರಟು ಹೋಗಬೇಕೆಂದು ಅಮೆರಿಕ ಆಗ್ರಹಿಸಿದೆ.

ಕಳೆದ ಶನಿವಾರಕ್ಕೆ ಅಂತಿಮ ಗಡು ಮುಗಿದಿತ್ತು. ಆದರೆ ಲಿಬಿಯದಲ್ಲಿ ಅಂತಹ ಚಲನೆಯಾಗಲಿ, ಘೋಷಣೆಯಾಗಲಿ ನಡೆದಿಲ್ಲ. ರಷ್ಯ, ಟರ್ಕಿ, ಯುಎಇ ಸಹಿತ ಎಲ್ಲ ಹೊರಗಿನವರು ಲಿಬಿಯದ ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಲಿಬಿಯದಲ್ಲಿ ಎಲ್ಲ ರೀತಿಯ ಸೈನಿಕ ಹಸ್ತಕ್ಷೇಪವನ್ನು ಶೀಘ್ರ ಕೊನೆಗೊಳಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಅಮೆರಿಕದ ರಾಯಭಾರಿ ರಿಚರ್ಡ್ ಮಿಲ್ಸ್ ಹೇಳಿದ್ದಾರೆ.