ಮುದ್ದೇಬಿಹಾಳ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಿಐಓ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದಿಂದ ಪ್ರತಿಭಟನೆ

0
417

ಸನ್ಮಾರ್ಗ ವಾರ್ತೆ

ಮುದ್ದೆಬಿಹಾಳ: ವಕ್ಫ್ ತಿದ್ದುಪಡಿ ಕಾಯ್ದೆ 2025 ರನ್ನು ವಿರೋಧಿಸಿ ಜಮಾಅತೆ ಇಸ್ಲಾಮಿ ಹಿಂದ್, ಮುದ್ದೆಬಿಹಾಳ ಮಹಿಳಾ ಘಟಕ ಹಾಗೂ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೆಷನ್ (GIO) ವತಿಯಿಂದ ತಾಲ್ಲೂಕು ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಯಿತು.

ಜಿಐಓ ಸದಸ್ಯರು, ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಪಾಲ್ಗೊಂಡ ಈ ಸಭೆಯಲ್ಲಿ ‘We reject Waqf Amendment Act 2025’ ಎಂಬ ಹೋಲ್ಡಿಂಗ್ ಹಿಡಿದು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಲಾಯಿತು.

ಈ ತಿದ್ದುಪಡಿ ಕಾಯ್ದೆಯು ವಕ್ಫ್ ಆಸ್ತಿ ನಿರ್ವಹಣೆಗೆ ಧಕ್ಕೆಯಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದವರು ಆರೋಪಿಸಿದರು. ಜನಸಾಮಾನ್ಯರ ಸಹಭಾಗಿತ್ವವಿಲ್ಲದೆ ತಿದ್ದುಪಡಿ ಜಾರಿಗೆ ತರಲು ಯತ್ನಿಸಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುಮಯ್ಯ ಖಾನ್ ಸ್ಥಾನೀಯ ಅಧ್ಯಕ್ಷೆ, ಮುಸರತ್ ನದಾಪ, ರಝಿಯಾ ಅಬಾಲೇ ಸಂಚಾಲಕಿ ಮಹಿಳಾ ಘಟಕ ಜಮಾಅತೆ ಇಸ್ಲಾಮಿ ಹಿಂದ್, ಹಾವೇಲೀ ಮೇಡಂ, ನಜ್ಮಾ ಘಾಟಿ, ಆಫ್ರಿನ ಮೂಮಿನ್, ಸಾನೀಯಾ ಬಾಗಲಕೋಟೆ, ಹಲೀಮಾ ಮಕಾನದಾರ, ಶಗುಪ್ತಾ ದಫೇದಾರ್, ಸಬಾ ಶಿರಗುಂಪಿ, ಕುಲ್ಸುಮ್ ಖಾನ್, ಬಿಸ್ಮಿಲ್ಲಾ ನದಾಫ್, ಯಾಸ್ಮಿನ್ ಎಲಿಗಾರ್ ಮತ್ತಿತರರು ಉಪಸ್ಥಿತರಿದ್ದರು.