ಬೆಳಗಾವಿ: HRS ವತಿಯಿಂದ NGO ಹೊಣೆಗಾರರ ಸಭೆ

0
244

ಸನ್ಮಾರ್ಗ ವಾರ್ತೆ

ಬೆಳಗಾವಿ: ಹೆಚ್.ಆರ್. ಎಸ್. ವತಿಯಿಂದ ಬೆಳಗಾವಿಯ ಸಂದೇಶ ಸದನ ಸಭಾಂಗಣದಲ್ಲಿ NGO ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಹೆಚ್.ಆರ್‌.ಎಸ್‌ ನ ಉದ್ದೇಶ, ಕಾರ್ಯವಿಧಾನ ಹಾಗೂ ಚಟುವಟಿಕೆಗಳ ವಿವರವನ್ನು PPT ಪ್ರೆಸೆಂಟೇಷನ್ ಮೂಲಕ ವಿವರಿಸಲಾಯಿತು, ಅದೇ ರೀತಿಯಲ್ಲಿ ಉಪಸ್ಥಿತರಿದ್ದ NGOಗಳ ಹೊಣೆಗಾರರು ಕೂಡ ತಮ್ಮ ತಮ್ಮ NGO ಗಳ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಬಳಿಕ ಪರಸ್ಪರ ಮುಕ್ತ ಚರ್ಚೆ ನಡೆಯಿತು.

ಬೆಳಗಾವಿ ಪ್ರದೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಆಧುನಿಕ ಶೈಕ್ಷಣಿಕ ಯುಗದಲ್ಲಿ ಬೆಳಗಾವಿಯಲ್ಲಿ ಕನ್ನಡ ಕಲಿಕೆಯ ಕೊರತೆಯಿಂದ ವಿದ್ಯಾರ್ಥಿಗಳು ತೇರ್ಗಡೆಯಾಗದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಮಾಜದ ಯುವ ಪೀಳಿಗೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಕೂಡ ಗಮನ ಹರಿಸಬೇಕು ಎಂಬ ಅಭಿಪ್ರಾಯ ಬಂತು.

ಸಮುದಾಯದ ಜನರ ದಾಖಲೆ ಪತ್ರಗಳನ್ನು ಸರಿಪಡಿಸಿಟ್ಟುಕೊಳ್ಳಬೇಕು. ನಮ್ಮ ನಮ್ಮ ಕಾರ್ಯ ಕ್ಷೇತ್ರದೊಳಗಿದ್ದುಕೊಂಡು ಸಮಾಜದ ಸುಧಾರಣೆಗಾಗಿ ಕಾರ್ಯಗಳನ್ನು ಮಾಡಬಹುದು ಎಂಬ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಶುಐಬ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಬೆಳಗಾವಿಯ ಎಚ್ ಆರ್ ಎಸ್ ನ ಗ್ರೂಪ್ ಲೀಡರ್ ಯಾಸೀನ್ ಮಕಾನ್ದಾರ್ ಸ್ವಾಗತ ಮತ್ತು ಪ್ರಾಸ್ತಾವಿಕವನ್ನು ಮಾತನಾಡಿದರು. ಹೆಚ್.ಆರ್.ಎಸ್. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮರಕಡ PPT ಮೂಲಕ ಹೆಚ್.ಆರ್.ಎಸ್.ನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದ್ದರು. ಝೋನಲ್ ಲೀಡರ್ ಅಬ್ದುಲ್ ರಶೀದ್ ನದಾಫ್ ರವರು ಮುಕ್ತ ಚರ್ಚೆಯಲ್ಲಿ ಬಂದಂತಹ ಪ್ರಮುಖ ಅಂಶಗಳ ಮೇಲೆ ಒಮ್ಮತದ ಅಭಿಪ್ರಾಯವನ್ನು ಮುಂದಿಟ್ಟರು.

ನಮ್ಮ ಕಾರ್ಯ ಚಟುವಟಿಕೆಗಳು ತೋರಿಕೆಗಾಗಿ ಇರಬಾರದು. ಸೇವೆಯ ಪ್ರತಿಫಲ ನಮ್ಮೆಲ್ಲರ ಸೃಷ್ಠಿಕರ್ತನಿಂದ ಮಾತ್ರ ನಿರೀಕ್ಷಿಸಬೇಕು. ನಮ್ಮ ಸೇವಾ ಚಟುವಟಿಕೆಗಳಿಂದ ಸಮಾಜದಲ್ಲಿ ಉತ್ತಮ ಬದಲಾವಣೆಗಳಾಗಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಬೆಳಗಾವಿಯ ಅದ್ಯಕ್ಷರಾದ ಮುಹ್ಸಿನ್ ದಾಲಾಯತ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಪರ್ವೇಝ್ ಮಕಾನ್ದಾರ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

ಈ ಕಾರ್ಯಕ್ರಮದಲ್ಲಿ ವಿವಿಧ NGO ಗಳ ಹೊಣೆಗಾರರು ಭಾಗವಹಿಸಿದ್ದರು. ವಿಶೇಷವಾಗಿ ಅಲ್ ಇಕ್ರಾ ಅಧ್ಯಕ್ಷರಾದ ಶಾನವಾಜ್ ಖಾನ್, ಮದೀನಾ ರಿಲೀಫ್ ಫೌಂಡೇಶನ್ ಕಾರ್ಯದರ್ಶಿಯಾದ ಸರ್ಫರಾಝ್, ಡಿಯರ್ ಹುಡ್ ಅಧ್ಯಕ್ಷರಾದ ರೆಹ್ಬರ್ ಮಾಲಿ. B.H.F ಅಧ್ಯಕ್ಷರಾದ ಅಬ್ದುಲ್ ಖಾದರ್, A.M.P ನಿರ್ದೇಶಕರಾದ ಸಾದಿಕ್ ಪಚಾಪುರ್, ಆಶಾ ಫೌಂಡೇಶನ್ ಅಧ್ಯಕ್ಷರಾದ ನಿಸಾರ್ ಅಹ್ಮದ್, ROMAN ಅಧ್ಯಕ್ಷರಾದ ಅಪ್ತಾಬ್ ಬಾಂದರ್, Help Line ಅಧ್ಯಕ್ಷರಾದ ಸಲೀಮ್ ಮುಲ್ಲಾ, SUFA ಅಧ್ಯಕ್ಷರಾದ ಖ್ವಾಜಾ. ನಿಝಾಮಿಯ ಬೈತುಲ್ ಮಾಲ್ ಇದರ ಅಧ್ಯಕ್ಷರಾದ ಸಲೀಮ್ ಸಯೀದ್, ಭಾಗ್ವಾನ್ ವೆಲ್ಫೇರ್ ಸೊಸೈಟಿಯ ಸದಸ್ಯರಾದ ತೌಫೀಕ್ ಹಾಗೂ ಸಮಾಜ ಸೇವಕರಾದ ಅಬ್ದುಲ್ ರವೂಫ್ ಬಾಗೆವಾಡಿ, ತೌಫೀಕ್ ಮುಜಾವರ್, ಆಸಿಫ್ ಸಿದ್ದಿ ಬಿಲಾಲ್, ಇಜಾಝ್ ಮುಂತಾದವರು ಉಪಸ್ಥಿತರಿದ್ದರು.