ಮುಹಮ್ಮದ್ ಹುಸೇನ್ ಕೊಪ್ಪಳ ನಿಧನ

0
567

ಸನ್ಮಾರ್ಗ ವಾರ್ತೆ

ರೋಣ: ಮುಹಮ್ಮದ್ ಹುಸೇನ್ ಕೊಪ್ಪಳ ಎಂ.ಎಫ್ ಕೊಪ್ಪಳ ಜನಾಬ್ ಎಂದೇ ಚಿರಪರಿಚಿತರಾಗಿದ್ದ ಅವರು ತಮ್ಮ 96 ಇಳಿ ವಯಸ್ಸಿನಲ್ಲಿ ನಿನ್ನೆ ರಾತ್ರಿ 11 ಘಂಟೆಗೆ ಮಗನ ಊರು ಗಜೇಂದ್ರಗಡದಲ್ಲಿ ನಿಧನ ಹೊಂದಿದರು.

ಜಮಾಅತಿನ ಕಾರ್ಯಕರ್ತರಾಗಿದ್ದ ಅವರು ಹಲವು ವರ್ಷಗಳ ವರೆಗೆ ಜಮಾಅತಿನ ಅಧೀನದಲ್ಲಿರುವ ಮದೀನಾ ಮಸೀದಿಯಲ್ಲಿ ಇಮಾಮ್ ಹಾಗೂ ಖತೀಬರಾಗಿ ಸೇವೆ ಸಲ್ಲಿಸಿದ್ದಾರೆ. ರೋಣದಲ್ಲಿ ಜಮಾಅತನ್ನು ಮುನ್ನಡೆಸುವುದರಲ್ಲಿ ಅವರ ಅಪಾರ ಪಾತ್ರವಿದೆ.

ಒಟ್ಟು ಹನ್ನೊಂದು ಜನ ಮಕ್ಕಳನ್ನು (ಇಬ್ಬರು ತೀರಿಕೊಂಡಿದ್ದಾರೆ) ಹಾಗೂ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.

ಅವರ ನಿಧನಕ್ಕೆ ಜ.ಇ. ಹಿಂದ್ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ಕಾರ್ಯದರ್ಶಿ ಯೂಸುಫ ಕನ್ನಿ, ಸಹ ಕಾರ್ಯದರ್ಶಿ ರಿಯಾಝ್ ರೋಣ ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.