‘ಕಾಲವೇ ಸಾಕ್ಷಿ, ಹುಟ್ಟಿದ ಭೂಮಿಗಾಗಿ ಪ್ಯಾಲೆಸ್ತೀನ್ ಜನತೆಯ ಹುತಾತ್ಮತೆ ವ್ಯರ್ಥವಾಗದು’; ಪಿ. ಮುಜೀಬ್ ರೆಹಮಾನ್

0
17936

ತಮ್ಮ ಮಣ್ಣಿಗಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ಯಾಲೆಸ್ತೀನ್ ಜನತೆಯ ಹೋರಾಟ ಇಂದು ಅಪ್ರತಿಮವಾದುದು ಎಂದು ಮುಜೀಬ್ ರಹಮಾನ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್: ಪ್ಯಾಲೆಸ್ತೀನ್ ವಿಮೋಚನೆಯ ಹೋರಾಟವು ಬದುಕಿಗಾಗಿನ ಹೋರಾಟ ಕೂಡಾ ಆಗಿದೆ ಎಂದು ಜಮಾಅತೆ ಇಸ್ಲಾಮಿ, ಹಿಂದ್, ಕೇರಳ ರಾಜ್ಯಾಧ್ಯಕ್ಷ ಪಿ. ಮುಜೀಬ್ ರೆಹ್ಮಾನ್ ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿಯೊಬ್ಬ ಪ್ಯಾಲೆಸ್ತೀನಿಯನ್ ವಿಜಯದವರೆಗೆ ಹೋರಾಡುತ್ತಾನೆ. ಅವರು ಇಸ್ರೇಲ್‌ನ ಕ್ರೂರ ಸಾಂಸ್ಕೃತಿಕ ಆಕ್ರಮಣ, ನರಮೇಧ ಮತ್ತು ಸಾಮ್ರಾಜ್ಯಶಾಹಿ ಪಿತೂರಿಯ ವಿರುದ್ಧ ತಾವು ಜನಿಸಿದ ನೆಲದ ಸ್ವಾತಂತ್ರ್ಯ ಮತ್ತು ಖುದ್ಸ್ ನ ವಿಮೋಚನೆಗಾಗಿ ಅನುಪಮ ಹೋರಾಟದಲ್ಲಿ ತೊಡಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮುಜೀಬ್ ರೆಹಮಾನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಗಾಝಾದಲ್ಲಿ ಬೆರಳೆಣಿಕೆಯಷ್ಟು ಭೂಮಿಯಲ್ಲಿ ನೆಲೆಯನ್ನು ಸ್ಥಾಪಿಸಿ, ಆಕ್ರಮಣಕಾರಿ ಗೋಲಿಯಾತ್‌ಗಳ ಜನಾಂಗೀಯ ಗೋಡೆಗಳನ್ನು ಮುರಿದು, ಹುಟ್ಟಿದ ಭೂಮಿಗಾಗಿ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಪ್ಯಾಲೆಸ್ತೀನ್ ಜನತೆ ಇಂದು ಹೋರಾಡುತ್ತಿದ್ದಾರೆ. ಜನಿಸಿದ ಮಣ್ಣಿಗಾಗಿ ಪೆಲೆಸ್ತೀನ್ ಜನತೆಯ ರಕ್ತ ಸಾಕ್ಷಿತ್ವವು ವ್ಯರ್ಥವಾಗುವುದಿಲ್ಲ ಎಂದು ಮುಜೀಬ್ ರೆಹಮಾನ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.