ತಾನು ಸಾಯವೆನೇ? ಮಗನ ಮಾತು ಕೇಳಿ ಹೃದಯಕ್ಕೆ ಚೂರಿ ಇರಿದಂತಾಗಿತ್ತು: ಕೊರೋನಾ ಪೀಡಿತ ಮಗುವಿನ ತಾಯಿಯ ಬರಹ ವೈರಲ್

0
7827

ಸನ್ಮಾರ್ಗ ವಾರ್ತೆ

ಲಂಡನ್, ಮಾ. 26: ಅಪ್ರಜ್ಞಾವಸ್ಥೆಯಲ್ಲಿದ್ದಾಗ ಅವನು ಮೆಲು ದನಿಯಲ್ಲಿ ಕೇಳುತಾ ಇದ್ದ. ಅಮ್ಮ, ನಾನು ಸಾಯುವನೇ?? ನನ್ನಿಂದ ಆಗಿನ ಸ್ಥಿತಿಯನ್ನು ಸಹಿಸಲಸಾಧ್ಯವಾದುದಾಗಿತ್ತು…

ಇದು ಲಂಡನ್ ವರ್ಸೆಸ್ಟರ್ ಲೊರೊನ್ ಫುಲ್‍ಬ್ರೂಕ್‍ರ ಫೇಸ್‍ಬುಕ್ ಪೋಸ್ಟ್. ಇದನ್ನು ಓದುವಾಗ ಹೃದಯಕ್ಕೆ ಚೂರಿ ಇರಿದಂತಹ ಅನುಭವವಾಗುತ್ತಿದೆ. ಐದು ವರ್ಷದ ಮಗನನ್ನು ಉಪಚರಿಸಿದ ತಾಯಿಯ ಆ ದಿನಗಳ ಅನುಭವ ಇದು. ವೈರಸ್ ಹರಡದಂತೆ ಸಾಮಾಜಿಕ ಸಂಪರ್ಕದಿಂದ ದೂರ ಇರಬೇಕೆಂಬ ಸಂದೇಶವನ್ನು ಅವರು ನೀಡಿದ್ದು, ಇದನ್ನು ಅರ್ಧ ಲಕ್ಷಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
ಕೊರೊನಾ ತಮಾಷೆಯಲ್ಲ ಎಂಬ ತಲೆ ಬರಹದಲ್ಲಿ ಅವರು ಈ ಪೋಸ್ಟ್ ಹಾಕಿದ್ದಾರೆ. ಒಬ್ಬ ತಾಯಿಯ ಹೃದಯ ಭಂಜಕ ಅನುಭವವನ್ನು ಲಾರೆನ್ ಹೀಗೆ ಹಾಕಿದ್ದಾರೆ. ತನ್ನ ಐದು ವರ್ಷದ ಮಗು ಆಲ್ಫಿಯು ಕೊರೊನಾ ಪೀಡಿತನಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಅನುಭವಿಸಿದ ನೋವುಗಳನ್ನು ಲೊರೊನ್ ಹೀಗೆ ಬರೆದಿದ್ದಾರೆ-

ಸಾಮಾನ್ಯವಾಗಿ 42 ಸೆಲ್ಸಿಯಸ್ ಡಿಗ್ರಿ ಜ್ವರ ಇರುತ್ತಿತ್ತು. ಅಪ್ರಜ್ಞಾವಸ್ಥೆ, ವಾಂತಿ, ತಲೆನೋವು, ನಡುಕ, ಉಸಿರಾಡಲು ಕಷ್ಟವಾಗುವುದು.. ಇವೆಲ್ಲವನ್ನೂ ಪುಟ್ಟ ಮಗು ಅಲ್ಫಿ ಅನುಭವಿಸಿದ್ದಾನೆ. ಜಗತ್ತಿನ ಸಕಲ ಶಕ್ತಿಯನ್ನೂ ಒಟ್ಟುಗೂಡಿಸಿ ನಡೆಯಲು ಶ್ರಮಿಸಿದ. ಆದರೆ, ಸಾಧ್ಯವಾಗಲಿಲ್ಲ. ಆಹಾರ ಸೇವಿಸಲಾಗಲಿಲ್ಲ. ಕೆಲವೊಮ್ಮೆ ನೀರು ಮಾತ್ರ ಕುಡಿಯುತ್ತಿದ್ದ. ಇದನ್ನೆಲ್ಲ ನನಗೆ ನೋಡಬೇಕಾಗಿ ಬಂತು. 40 ಡಿಗ್ರಿ ಸೆಲ್ಸಿಯಸ್‍ನಿಂದ ಜ್ವರ ಕೆಳಗೆ ಇಳಿಯಲೇ ಇಲ್ಲ. ತಲೆನೋವು ಸಹಿಸಲಾಗದೆ ಅವನು ಬೊಬ್ಬೆ ಹೊಡೆಯುತ್ತಿದ್ದ.

ಅಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ತಾನು ಸಾಯುವೆನೇ ಎಂದು ಅವನು ಸಣ್ಣ ದನಿಯಲ್ಲಿ ಕೇಳುತ್ತಿದ್ದ. ಜೀವನದಲ್ಲಿ ಅತ್ಯಂತ ಸಂಕಟಕರ ಅನುಭವ ಇದು. ಓರ್ವ ಕೊರೊನಾ ರೋಗಿಯನ್ನು ಉಪಚರಿಸಿದ ವ್ಯಕ್ತಿ ಎಂಬ ನೆಲೆಯಲ್ಲಿ, ಅದರ ಪ್ರತ್ಯಾಘಾತಗಳನ್ನು ಕಂಡವಳು ಎಂಬ ನೆಲೆಯಲ್ಲಿ ನಾನು ಎಲ್ಲರೊಂದಿಗೆ ಮನವಿ ಮಾಡುತ್ತಿದ್ದೇನೆ. -ಸಾಮಾಜಿಕ ಸಂಪರ್ಕದಿಂದ ದೂರ ಇರಿ. ಪಬ್, ರೆಸ್ಟುರಾಗಳಿಗೆ ಹೋಗುವುದು ಈಗ ಮುಖ್ಯವಲ್ಲ. ಮನೆಯಲ್ಲಿ ಕುಳಿತುಕೊಳ್ಳಿ ಎಂದು ಸರಕಾರ ಹೇಳಿದ್ದನ್ನು ಪಾಲಿಸಬೇಕು. ಎಷ್ಟು ಬೇಗನೆ ನೀವು ಸಾಮಾಜಿಕ ಸಂಪರ್ಕದಿಂದ ದೂರ ಇರುವಿರಾ ಅಷ್ಟೇ ಬೇಗನೆ ಎಲ್ಲವೂ ಸರಿಯಾಗಬಹುದು.

ಅನುಕಂಪ ಸಿಗಲು ನಾನು ಈ ಪೋಸ್ಟ್ ಬರೆಯುತ್ತಿಲ್ಲ. ಜನರು ಸುರಕ್ಷಿತರಾಗಬೇಕೆಂಬ ಉದ್ದೇಶದಿಂದ ಬರೆಯುತ್ತಿದ್ದೇನೆ. ನಿಮ್ಮ ಸುರಕ್ಷೆ ಮಾತ್ರವಲ್ಲ ಸಹಜೀವಿಗಳ ಸುರಕ್ಷೆಯೂ ನಿಮ್ಮ ಕೈಯಲ್ಲಿದೆ ಎಂದು ಲೊರೆನ್ ಹೇಳುತ್ತಾರೆ.

ಕೊರೊನಾಕ್ಕೆ ಇಂಗ್ಲೆಂಡಿನಲ್ಲಿ 422 ಮಂದಿ ಮೃತಪಟ್ಟಿದ್ದು. 8,077 ಮಂದಿ ರೋಗ ಪೀಡಿತರಾಗಿದ್ದಾರೆ.