ಟೋಪಿ ಧರಿಸಿದ್ದಕ್ಕಾಗಿ ಹಂದಿ ಮಾಂಸ ತಿನ್ನಿಸುವ ಬೆದರಿಕೆಯೊಡ್ಡಿ ಮುಸ್ಲಿಮ್ ಯುವಕನಿಗೆ ಗುಂಪಿನಿಂದ ಹಲ್ಲೆ

0
1020

ಗುರುಗ್ರಾಮ(ಹರಿಯಾಣ),ಮೇ 27: ಹರಿಯಾಣದ ಗುರುಗ್ರಾಮದಲ್ಲಿ ಟೋಪಿ ಧರಿಸಿದ್ದಕ್ಕಾಗಿ ಮುಸ್ಲಿಂ ಯುವಕನಿಗೆ ಗುಂಪೊಂದು ಹಲ್ಲೆ ನಡೆಸಿದೆ. ನಗರದ ದರ್ಜಿ ಮುಹಮ್ಮದ್ ಬರ್ಕತ್‍ಗೆ(25) ಆರು ಮಂದಿ ತಂಡ ಮಾರಣಾಂತಿಕವಾಗಿ ಥಳಿಸಿ, ಹಂದಿ ಮಾಂಸ ತಿನ್ನುಸುವ ಬೆದರಿಕೆಯನ್ನೂ ಒಡ್ಡಿದೆ. ಜೈ ಶ್ರೀಮ್, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಲು ಬೆದರಿಸಿತೆಂದು ಬರ್ಕತ್ ದೂರು ನೀಡಿದ್ದಾನೆ.

ರಾತ್ರೆ ಹತ್ತೂವರೆ ಗಂಟೆಗೆ ಕೆಲಸ ಮುಗಿಸಿ ಗುರುಗ್ರಾಮ್ ಜುಮಾ ಮಸೀದಿಯಲ್ಲಿ ನಮಾಝ್‍ನ ಬಳಿಕ ಮನೆಗೆ ಹೋಗುವಾಗ ತಂಡ ಹಲ್ಲೆ ನಡೆಸಿದೆ. ಈ ಸ್ಥಳದಲ್ಲಿ ಟೋಪಿ ಧರಿಸುವಂತಿಲ್ಲ ತೆಗೆ ಎಂದು ನಿಂದಿಸಿ ಗುಂಪು ಹಲ್ಲೆ ನಡೆಸಿದೆ. ತಾನು ದೊಡ್ಡ ದನಿಯಲ್ಲಿ ಅಳ ತೊಡಗಿದಾಗ ಅವರು ಬೈಕ್‍ನಲ್ಲಿ ಪರಾರಿಯಾದರು ಎಂದು ಬರ್ಕತ್ ಹೇಳಿದನು. ನಂತರ ಅಲ್ಲಿಗೆ ಬಂದ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ.