ಟೋಕಿಯೊದಲ್ಲಿ ಯದ್ವಾತದ್ವಾ ಕತ್ತಿಯಿಂದ ಇರಿತ: ಬಾಲಕಿ ಸಹಿತ ಮೂವರ ಸಾವು

0
463

ಟೋಕಿಯೊ, ಮೇ 28: ಎರಡು ಕತ್ತಿಯೊಂದಿಗೆ ಬಂದ ಅಜ್ಞಾತ ವ್ಯಕ್ತಿಯೊಬ್ಬ ಯದ್ವಾತದ್ವಾ ಇರಿದು ಓರ್ವ ಬಾಲಕಿಯ ಸಹಿತ ಮೂವರನ್ನು ಹತ್ಯೆ ಮಾಡಿದ್ದಾನೆ. ನಗರದ ಬಸ್‍ನಿಲ್ದಾಣದ ಸಮೀಪ ಘಟನೆ ನಡೆಯಿತು. ಮಕ್ಕಳು ಮತ್ತು ಹಿರಿಯರ ಮೇಲೆ ಈತ ಎರಡು ಕತ್ತಿಯಿಂದ ಇರಿದಿದ್ದಾನೆ. ಕೊನೆಗೆ ತಾನೇ ಕತ್ತಿಯಿಂದ ಇರಿದು ಕೊಂಡು ಸತ್ತು ಬಿದ್ದಿದ್ದಾನೆ.

ಈ ವೇಳೆ ಆರು, ಏಳು ವರ್ಷದ ಮಕ್ಕಳು ಸ್ಥಳದಲ್ಲಿದ್ದರು. ಟೋಕಿಯೊದಿಂದ 20 ಕಿಲೊಮೀಟರ್ ದೂರದ ವಾಸಾಕಿಯಲ್ಲಿ ಈತನಿಂದ ದಾಂಧಲೆ ನಡೆದಿದ್ದು 19 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚು ಮಕ್ಕಳಾಗಿದ್ದು ಕೆಲವರು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.