ಇಂದೋರ್ ನ ಶೀತಲಮಾತ ಮಾರುಕಟ್ಟೆಗೆ ಮುಸ್ಲಿಮರಿಗೆ ನಿಷೇಧ

0
656

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶದ ಇಂದೋರ್ ನ ಶೀತಲಮಾತ ಮಾರುಕಟ್ಟೆಯು ಬಟ್ಟೆ ಅಂಗಡಿಗೆ ಪ್ರಸಿದ್ಧವಾಗಿದೆ. ಅದರಲ್ಲೂ ಮಹಿಳೆಯರ ಉಡುಪಿಗಾಗಿ ಗುರುತಿಸಿಕೊಂಡಿದೆ. ಇಂದೋರ್ ನ ಅತ್ಯಂತ ಹಳೆಯ ಮಾರುಕಟ್ಟೆಯಲ್ಲಿ ಇದೂ ಒಂದಾಗಿದ್ದು ಇದೀಗ ಬಿಜೆಪಿಯ ಸ್ಥಳೀಯ ಶಾಸಕನ ಮಗ ಏಕಲವ್ಯ ಸಿಂಗ್ ಹೊರಡಿಸಿದ ಹೇಳಿಕೆಯು ನೂರಾರು ಕಾರ್ಮಿಕರಲ್ಲಿ ಭಯವನ್ನು ಮೂಡಿಸಿದೆ. ಈ ಮಾರುಕಟ್ಟೆಯಲ್ಲಿ 501 ಶಾಪ್ ಗಳಿದ್ದು ಇದರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸೇಲ್ಸ್ ಮ್ಯಾನ್ ಗೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.

ಒಂದು ವೇಳೆ ಯಾರಾದ್ರೂ ಮುಸ್ಲಿಮರಿಗೆ ಅಂಗಡಿಯನ್ನು ಬಾಡಿಗೆಗೆ ನೀಡಿದ್ದರೆ ಅವರು ಎರಡು ತಿಂಗಳೊಳಗೆ ಜಾಗ ಖಾಲಿ ಮಾಡಬೇಕು , ಲವ್ ಜಿಹಾದ್ ಅನ್ನು ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಏಕಲವ್ಯ ಸಿಂಗ್ ಹೇಳಿದ್ದಾರೆ.

ಇಲ್ಲಿನ ಅಂಗಡಿಗಳಲ್ಲಿ ಮುಸ್ಲಿಂ ಯುವಕರು ಹಲವು ವರ್ಷಗಳಿಂದ ದುಡಿಯುತ್ತಿದ್ದು ಈ ಬೆಳವಣಿಗೆಯು ಅವರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಮತ್ತು ಅವರು ನಿರುದ್ಯೋಗದ ಸಮಸ್ಯೆಯನ್ನು ಎದುರಿಸಲಿದ್ದಾರೆ ಎಂದು ವರದಿಯಾಗಿದೆ.

ಶೀತ್ಲಾಮಾತ ಮಾರ್ಕೆಟ್ ನ ಪ್ರಧಾನ ಕಾರ್ಯದರ್ಶಿ, ಪಪ್ಪು ಮಹೇಶ್ವರಿಯವರು ಈ ಬೆಳವಣಿಗೆಯನ್ನು ದೃಢೀಕರಿಸಿದ್ದಾರೆ. ಶೀತಲ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಯುವಕರನ್ನು ಶೀಘ್ರವೇ ಅಲ್ಲಿಂದ ಖಾಲಿ ಮಾಡಿಸಲಾಗುವುದು. ಯಾರು ಬಾಡಿಗೆಗೆ ಅಂಗಡಿಯನ್ನು ಮಾಡಿಕೊಂಡಿದ್ದಾರೋ ಅವರನ್ನು ಹೊರಹಾಕಲಾಗುವುದು. ಅವರಿಗೆ ಎರಡು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಪಪ್ಪು ಹೇಳಿದ್ದಾರೆ.

ಈ ಬೆಳವಣಿಗೆಯನ್ನು ಕಾಂಗ್ರೆಸ್ ಟಿಕೀಸಿದೆ. ಕಾಂಗ್ರೆಸ್ ಅಧ್ಯಕ್ಷ ಚಿಂತು ಚೌಕ್ಸಿ ಈ ಬೆಳವಣಿಗೆಯನ್ನು ಖಂಡಿಸಿದ್ದಾರೆ. ಹಿಂದೂ ಮುಸ್ಲಿಮರನ್ನು ಧರ್ಮದ ಆಧಾರದಲ್ಲಿ ಕಚ್ಚಾಡಿಸುವುದೇ ಬಿಜೆಪಿಯ ಕೆಲಸ ಎಂದವರು ಆರೋಪಿಸಿದ್ದಾರೆ.